ಉಡುಪಿ- 4 ವರ್ಷದ ಬಳಿಕ ಸಂಭ್ರಮದಿಂದ ನಡೆಯಿತು ಕಾಪು ಪಿಲಿ ಕೋಲ
Saturday, May 14, 2022
ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿಯ ಕಾಪು ಪಿಲಿಕೋಲ, ಕೊರೊನಾ ಕಾರದಿಂದ ಈ ಬಾರಿ ನಾಲ್ಕು ವರ್ಷಗಳ ಬಳಿಕ ಇಂದು ನಡೆಯಿತು.
ಕರಾವಳಿಯಲ್ಲಿ ಬಾರೀ ಪ್ರಸಿದ್ದಿ ಪಡೆದ ಪಿಲಿ ಕೋಲ ಇತರ ಕೋಲಗಳಿಗಿಂತ ಭಿನ್ನವಾಗಿದೆ. ಪಿಲಿಕೋಲದಲ್ಲಿ ಭೂತ ನರ್ತರು ಯಾರು ಎಂಬುದನ್ನು ಹಳೇ ಮಾರಿಯಮ್ಮ ನಿರ್ಧಾರವಾಗುತ್ತದೆ. ಪಿಲಿ ಕೋಲದಲ್ಲಿ ಸಂಪ್ರದಾಯ ಬದ್ದ ವಿವಿಧ ಸಿದ್ದತೆ ನಡೆಸಿ, ಸ್ನಾನ ಮಾಡಿಸಿ ಮದೆಯೊಳಗೆ ಕಳುಹಿಸಲಾಗುತ್ತದೆ. ಸಿರಿ ಒಲಿಗಳಿಂದ ನಿರ್ಮಿಸಿದ ಪಿಲಿ ಹೊರ ಬಂದು ಪಿಲಿ ಕೋಲ ಆರಂಭ ಆಗುತ್ತದೆ. ಎರಡು ವರ್ಷಕ್ಕೆ ಒಮ್ಮೆ ನಡೆಯು ಪಿಲಿ ಕೋಲ ಕೊರೊನಾ ಕಾರಣದಿಂದ ನಾಲ್ಕು ವರ್ಷಗಳ ಬಳಿಕ ನಡೆಯಿತು. ಊರೆಲ್ಲ ಸಂಚರಿಸುವ ಪಿಲಿ ಕೋಲ ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದರು.
.