
ಉದ್ಯೋಗ ಸಿಗದೇ 23 ವರ್ಷದ ಎಂಬಿಎ ಪಧವೀಧರೆ ಆತ್ಮಹತ್ಯೆ
ಉದ್ಯೋಗ ಸಿಗದೇ ಮನನೊಂದ ಎಂಬಿಎ ಪಧವೀಧರೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ
ಕಾಪು ತಾಲೂಕಿನ ಕಟ್ಟಿಂಗೇರಿಯಲ್ಲಿ ನಡೆದಿದೆ.
ಸಹನಾ (23 ) ವಿಷ ಸೇವಿಸಿ ಸಾವಿಗೆ ಶರಣಾದ ಯುವತಿ.
ಒಂದು ವರ್ಷದ ಹಿಂದೆ ಮಂಗಳೂರಲ್ಲಿ ಎಂಬಿಎ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಸಹನಾ,
ಅರ್ಹತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ಮನನೊಂದು,
ಕಟ್ಟಿಂಗೇರಿಯ ಅಕ್ಕನ ಮನೆಗೆ ಬಂದು ವಿಷ ಸೇವಿಸಿದ್ದಳು, ಬಳಿಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಹನಾಳನ್ನು ಉಡುಪಿಯ ಮಿಷನ್ ಆಸ್ಪತ್ರೆ, ಕೆಎಂಸಿ, ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಾಳೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..