ಧರ್ಮ ಸಂಘರ್ಷ ತಾರಕಕ್ಕೇರಿರುವ ಕರ್ನಾಟಕದಲ್ಲಿ ಸೌಹಾರ್ದತೆಯ story
Sunday, April 10, 2022
ತುಮಕೂರು: ಹಿಜಾಬ್, ಹಲಾಲ್, ವ್ಯಾಪಾರ ಬಹಿಷ್ಕಾರ ಮತ್ತಿತರ ವಿಚಾರದಲ್ಲಿ ಧರ್ಮ ಸಂಘರ್ಷ ತಾರಕಕ್ಕೇರಿರುವ ಕರ್ನಾಟಕದಲ್ಲಿ ರಾಮನವಮಿಯಂದು ಸೌಹಾರ್ದ ತೆಯ ಸುದ್ದಿಯೊಂದು ಹೊರಬಿದ್ದಿದೆ.
ತುಮಕೂರಿನಲ್ಲಿ ಮುಸ್ಲಿಮರೂ ಕೇಸರಿ ಶಲ್ಯ ಧರಿಸಿ, ಹಿಂದೂಗಳ ಜತೆ ಅವರೂ ಪಾನಕ ಹಂಚಿ ಶ್ರೀರಾಮ ನವಮಿಯಲ್ಲಿ ಭಾಗಿಯಾಗಿದ್ದಾರೆ.
ತುಮಕೂರು ನಗರದ ಭದ್ರಮ್ಮ ಸರ್ಕಲ್ನಲ್ಲಿ ಯುವ ಕಾಂಗ್ರೆಸ್ನಿಂದ ರಾಮನವಮಿ ಆಚರಣೆ ಮಾಡಲಾಗುತ್ತಿದ್ದು, 'ಶ್ರೀರಾಮ್' ಎಂದು ಘೋಷಣೆ ಕೂಗುತ್ತಾ ಕಾರ್ಯಕರ್ತರು ಜನರಿಗೆ ಪಾನಕ ಹಂಚುತ್ತಿದ್ದರು, ಅವರ ಜೊತೆ ಸ್ಥಳೀಯ ಮುಸ್ಲಿಮರೂ ಜೊತೆಯಾಗಿದ್ದಾರೆ.