Appointment letter ಕೈಸೇರುವ ಮುನ್ನವೇ PSI ಯುನಿಫಾರ್ಮ್ ಹಾಕಿ ಬಿಲ್ಡಪ್
Sunday, April 24, 2022
ಹಾವೇರಿ: PSI ಪಿ ನೇಮಕಾತಿ ಆದೇಶದ ಪತ್ರ ಕೈ ಸೇರುವ ಮುನ್ನವೇ, ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದಲ್ಲಿ ಸಮವಸ್ತ್ರ ಹಾಕಿಕೊಂಡು ಪೇದೆಯೊಬ್ಬ ಬಿಲ್ಡಪ್ ಕೊಟ್ಟಿರುವ ಘಟನೆ ನಡೆದಿದೆ.
ಸದ್ಯ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಸವನಗೌಡ ಕರೇಗೌಡ ಪಿಎಸ್‍ಐ ಸೆಲೆಕ್ಷನ್ ಆಗಿದ್ದಕ್ಕೆ ಗ್ರಾಮದಲ್ಲಿ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಿಎಸ್‍ಐ ಡ್ರೆಸ್ ಹಾಕ್ಕೊಂಡು ಬಸನಗೌಡ ಭಾಗವಹಿಸಿ ಭಾಷಣ ಮಾಡಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಅಂದ ಹಾಗೇ ಏಪ್ರಿಲ್ 20 ರಂದು ತನಿಖೆಗೆ ಹಾಜರಾಗುವಂತೆ ಸಿಐಡಿ ಸಹಾಯಕ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಐವತ್ತು ಜನರಿಗೆ ನೀಡಿದ್ದ ನೋಟಿಸ್ ಪಟ್ಟಿಯಲ್ಲಿದ್ದ ಬಸನಗೌಡ ಕರೇಗೌಡ ಹೆಸರ ಕೂಡ ಇದೆ.