
ಅಪ್ರಾಪ್ತ ಬಾಲಕನೊಂದಿಗೆ ಸೆ*ಕ್ಸ್ ಸಂಬಂಧ ಬೆಳೆಸಿದ AIDS ಸೋಕಿತ ಆಂಟಿ
ಉತ್ತರಾಖಂಡ: 23 ವರ್ಷದ ಮಹಿಳೆಯೊಬ್ಬಳು ತನ್ನ ಸೋದರ ಮಾವನ ಅಪ್ರಾಪ್ತ ಮಗನನ್ನು ಪುಸಲಾಯಿಸಿ ಅವನೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರದಲ್ಲಿ ಬೆಳಕಿಗೆ ಬಂದಿದೆ.
ಈ ಮಹಿಳೆ ಎಚ್‌ಐವಿ ಪಾಸಿಟಿವ್ ಆಗಿದ್ದು, ಅವಳು ತನ್ನ 15 ವರ್ಷದ ಸಂಬಂಧಿಗೆ ಏಡ್ಸ್ ಸೋಂಕು ತಗುಲಿಸಲು ಬಯಸಿದ್ದಳು. ಈ ಉದ್ದೇಶದಿಂದ ಆಕೆ ಬಾಲಕನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಳು. ಮಹಿಳೆಯ ಪತಿಗೂ ಏಡ್ಸ್ ಸೋಂಕು ತಗುಲಿದ್ದು, ಇತ್ತೀಚೆಗೆ ಅವರು ನಿಧನರಾಗಿದ್ದರು.
ತನ್ನ ಚಿಕ್ಕಮ್ಮ ಎಚ್‌ಐವಿ ಪಾಸಿಟಿವ್ ಎಂದು ಹುಡುಗನಿಗೆ ತಿಳಿದಾಗ, ಆತ ಭೀತಿಗೆ ಒಳಗಾಗಿದ್ದ. ಇಡೀ ಘಟನೆಯ ಬಗ್ಗೆ ಬಾಲಕ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ನಂತರ ಕುಟುಂಬವು ಈ ವಿಷಯವನ್ನು ಪೊಲೀಸರಿಗೆ ತಿಳಿಸಿತ್ತು. ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.