ಉಡುಪಿ ; ಸಂತೋಷ್ ಪಾಟೀಲ್ ಮೃತದೇಹ ಪಂಚನಾಮೆ- ಈಶ್ವರಪ್ಪ ಆರೋಪಿ ನಂ 1
Wednesday, April 13, 2022
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಂತೋಷ್ ಪಾಟೀಲ್ ಸಂಬಂಧಿಕರು ಉಡುಪಿಗೆ ಆಗಮಿಸಿ, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..
ಆತ್ಮಹತ್ಯೆ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಆರೋಪಿ ನಂ.1 ಸಚಿವರ ಆಪ್ತ ಬಸವರಾಜ್ A2 ಆರೋಪಿ ಇನ್ನೋರ್ವ ಆಪ್ತ ರಮೇಶ್ A3 ಆರೋಪಿ
ಅಂತ ದಾಖಲಿಸಲಾಗಿದೆ.. ಇನ್ನೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿ ನಗರದ ಕೆಎಸ್‌ಆರ್‌ಟಿಸಿ ಹಿಂಭಾಗದಲ್ಲಿ ಇರುವ ಶಾಂಬವಿ ಲಾಡ್ಜ್‌ನಲ್ಲಿ ಸಂಬಂಧಿಕರ ಸಮ್ಮಕದಲ್ಲೇ ಪಂಚನಾಮೆ ಶುರುವಾಗಿದೆ..ಸುಮಾರು ಮೂರು ಗಂಟೆಗಳ ಕಾಲ ಪಂಚನಾಮೆ ನಡೆಯಲಿದ್ದು ಬಳಿಕ, ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ...ಇನ್ನೂ
ಸಂತೋಷ್ ಶವ ಇರುವ ಹೋಟೆಲ್‌ನ ಕೊಠಡಿ ಸಂಖ್ಯೆ 207 ರಲ್ಲಿ ಬೆಡ್ ಮೇಲೆ ಅಂಗಾತ ವಾಗಿರುವ ಸಂತೋಷ್ ಪಾಟೀಲ್ ಶವ ಇದ್ದು, ಮೃತದೇಹದ ಪಕ್ಕದಲ್ಲೇ ಸಂತೋಷ್ ಮೊಬೈಲ್
ಡಸ್ಟ್ ಬಿನ್ ನಲ್ಲಿ ಜ್ಯೂಸ್ ಬಾಟಲ್, ವಿಷದ ಬಾಟಲ್ ಪತ್ತೆಯಾಗಿದೆ . ಬಾಯಿಯಲ್ಲಿ ನೊರೆ ತುಂಬಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಇದ್ದು, ಸಂತೋಷ್ ಪಾಟೀಲ್, ಬ್ಯಾಗ್, ಚಪ್ಪಲು ವಾಟರ್ ಬಾಟಲ್ ಹಾಗೂ ಬ್ಲ್ಯಾಂಕೆಟ್ ಅರ್ಧ ಸುತ್ತಿದ ಸ್ಥಿತಿಯಲ್ಲಿ ಮೃತದೇಹ ಇದೆ ಅಂತ
ಉಡುಪಿಯ ಪೊಲೀಸ್ ಮೂಲಗಳ ಮಾಹಿತಿ ನೀಡಿದೆ..