ಉಡುಪಿ- Scooty ಗೆ ಟಿಪ್ಪರ್ ಢಿಕ್ಕಿ: ಮಹಿಳೆ ಸಾವು
Monday, March 14, 2022
ಟಿಪ್ಪರ್ ಹಾಗೂ ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಹೆಮ್ಮಾಡಿಯಲ್ಲಿ ನಡೆದಿದೆ.
ಕುಂದಾಪುರದ ಅರೆಹೊಳೆ ಎರುಕೋಣೆ ನಿವಾಸಿ ಜ್ಯೋತಿ ಸಾವನ್ನಪ್ಪಿದ ಮಹಿಳೆ. ಇವರ ಪತಿ ಶರತ್ ಮತ್ತು ಮಗು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗದಿಂದ ಟಿಪ್ಪರ್ ಬಂದಿದ್ದು ಅದೇ ದಾರಿಯಲ್ಲಿ ತೆರಳುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಮಹಿಳೆ ತನ್ನ ಜೊತೆಗೆ ಬೀಳುತ್ತಿದ್ದ ಮಗುವನ್ನು ಇನ್ನೊಂದು ಕಡೆ ಹಾಕಿ, ಬೊಬ್ಬೆ ಹೊಡೆದರೂ, ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಮೇಲೆ ಹರಿದಿದೆ. ಮಗು ಹಾಗೂ ಆಕೆಯ ಪತಿ ಗಾಯಗೊಂಡಿದ್ದಾರೆ. ಕುಂದಾಪುರ ಸಂಚಾರಿ ಠಾಣೆ ಪ್ರಕರ ದಾಖಲಾಗಿದೆ..