ಗನ್ ತೋರಿಸಿ ಅತ್ಯಾಚಾರಗೈದ ದುಷ್ಕರ್ಮಿ ತಿಂಗಳುಗಳ ಕಾಲ ವೀಡಿಯೋ ತೋರಿಸಿ ಪೀಡಿಸಿದ: ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಮಹಿಳೆ
Wednesday, March 30, 2022
ಬಿಹಾರ: ಕೋವಿಡ್ -19 ಲಾಕ್‌ಡೌನ್ ಸಂದರ್ಭ ನೀರು ತುಂಬಿಸಲು ಹೋಗಿದ್ದ ಮಹಿಳೆಯೋರ್ವರನ್ನು ಬಂದೂಕು ತೋರಿಸಿ ಯುವಕನೋರ್ವ ಅತ್ಯಾಚಾರವೆಸಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿರುವ ಘಟನೆ ಬಿಹಾರದ ಕಬೀರ್‌ಪುರನಲ್ಲಿ ನಡೆದಿದೆ. ಅಲ್ಲದೆ ದುಷ್ಕರ್ಮಿಯು ಅತ್ಯಾಚಾರವೆಸಗಿರುವ ಘಟನೆಯ ವೀಡಿಯೊವನ್ನು ರೆಕಾರ್ಡ್ ಇರಿಸಿಕೊಂಡು ಬೆದರಿಕೆ ಒಡ್ಡುತ್ತಿರುವುದಾಗಿ ಮಹಿಳೆ ನೀಡಿರುವ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಇರ್ಫಾನ್ ಎಂಬ ದುಷ್ಕರ್ಮಿ ಮಹಿಳೆಯನ್ನು ಅತ್ಯಾಚಾರ ಮಾಡಿದಾತ. ಅತ್ಯಾಚಾರದ ಸಂದರ್ಭ ವೀಡಿಯೋ ಮಾಡಲಾಗಿದ್ದು, ಆತ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ದುಷ್ಕರ್ಮಿ ಬೆದರಿಕೆ ಒಡ್ಡುತ್ತಿದ್ದ. ಇದೇ ರೀತಿ ಬೆದರಿಕೆ ಒಡ್ಡುತ್ತಾ ಕಳೆದ ಕೆಲವು ತಿಂಗಳುಗಳಿಂದ ಆಕೆಯೊಂದಿಗೆ ಹಲವು ಬಾರಿ ಅನುಚಿತವಾಗಿ ವರ್ತಿಸಿದ್ದಾನೆ. ಪ್ರತಿದಿನ ಯಾವುದಾದರೂ ಸ್ಥಳಕ್ಕೆ ಕರೆಸಿ ತೊಂದರೆ ಕೊಡುತ್ತಿದ್ದಾನೆ ಎಂದು ಆಕೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.
ಆತ ಮತ್ತೊಮ್ಮೆ ತನ್ನ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಿರೋಧಿಸಿದ ಹಿನ್ನೆಲೆಯಲ್ಲಿ ತನ್ನಲ್ಲಿರುವ ವೀಡಿಯೊವನ್ನು ವೈರಲ್ ಮಾಡಿ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು ಎಂದು ಆಕೆ ಆರೋಪಿಸಿದ್ದಾಳೆ.
ಈ ಕಿರುಕುಳ ತಾಳದೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಆರೋಪಿ ಇರ್ಫಾನ್ ಪುನರಾವರ್ತಿತ ಅಪರಾಧಿ ಮತ್ತು ಆ ಪ್ರದೇಶದಲ್ಲಿ ಹಲವಾರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆದರೆ ಭಯದಿಂದ ಯಾರೂ ಅವನ ವಿರುದ್ಧ ಮಾತನಾಡಲಿಲ್ಲ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೂ ತಿಳಿಸಿದ್ದಾಳೆ ಎನ್ನಲಾಗಿದೆ.
ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಮಹಿಳೆ ಹೇಳಿಕೊಂಡಿದ್ದಾಳೆ. ಹಲವಾರು ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯ ಪ್ರತಿನಿಧಿಗಳು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ತ್ವರಿತ ನ್ಯಾಯ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ದೂರನ್ನು ಸ್ವೀಕರಿಸಿದ ಬಿಹಾರ ಪೊಲೀಸರು ತನಿಖೆ ನಡೆಸಿದ ನಂತರ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.