ಶಾಲಾ ಕಾಲೇಜಿಗೆ ಅಶಾಂತಿ ಉಂಟು ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಿ : ರಘುಪತಿ ಭಟ್
Thursday, March 17, 2022
ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ಬಳಿಕವೂ ಶಾಲಾ ಕಾಲೇಜು ಬಳಿ ಬಂದು ಶಾಂತಿ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಿ. ಅಲ್ಲದೇ ಮಧ್ಯಂತರ ಆದೇಶ ಗೊಂದಲದಿಂದ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಅಂತ ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರಘಪತಿ ಭಟ್, ಹಿಜಾಬ್ ಗೊಂದಲದ ಸಮಯದಲ್ಲಿ ಕೆಲವರಿಗೆ ಪ್ರಾಕ್ಟಿಕಲ್ ಹಾಗೂ ಪ್ರಿಪರೆಟರಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ, ಅಂತಹವರಿಗೆ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಅವಕಾಶ ನೀಡಿ ಬೇಡಿಕೆ ಇಟ್ಟುರು. ಅಲ್ಲದೇ ಶಾಲಾ ಕಾಲೇಜ್ ಬಳಿ ಹಿಜಾಬ್ ವಿಚಾರ ಮುಂದಿಟ್ಟು ಅಶಾಂತಿ ಸೃಷ್ಟಿಸುವರ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಆಗ್ರಹಿಸಿದ್ದಾರೆ. ಶಾಸಕ ರಘುಪತಿ ಭಟ್ ಪ್ರಸ್ತಾಪಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದನಿಗೂಡಿಸಿದರು.