-->
ads hereindex.jpg
ಕಾಪು ಮಾರಿ ಪೂಜೆಯಲ್ಲಿ ಮುಸ್ಲಿಂ ಅಂಗಡಿಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ಪತ್ರ ವೈರಲ್

ಕಾಪು ಮಾರಿ ಪೂಜೆಯಲ್ಲಿ ಮುಸ್ಲಿಂ ಅಂಗಡಿಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ಪತ್ರ ವೈರಲ್

ಇತಿಹಾಸ ಪ್ರಸಿದ್ದ ಉಡುಪಿಯ ಕಾಪು ಮಾರಿ ಪೂಜೆಯಲ್ಲಿ  ಮುಸ್ಲಿಂ ಸಮುದಾಯದವರಿಗೆ ಅಂಗಡಿ ನಡೆಸಲು ಅವಕಾಶ ನೀಡದಂತೆ ಎಚ್ಚರಿಕೆ ನೀಡಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಕಾಪು ಹಿಂದೂ ಕಾರ್ಯಕರ್ತರು ಎಂಬ ವಿಳಾಸದಲ್ಲಿ ಕಾಪು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸುವ ಪತ್ರ ಇದಾಗಿದ್ದು,  ಅದರಲ್ಲಿ  ಉಡುಪಿ ಜಿಲ್ಲೆ, ಕಾಪು ತಾಲೂಕು, ಕಾಪು ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಡು ಗ್ರಾಮದ ಮೂರು ಮಾರಿಗುಡಿಗಳಲ್ಲಿ ದಿನಾಂಕ: 22-03-2022 ಮತ್ತು 23-03-2022 ರಂದು ನಡೆಯುವ ಮಾರಿಪೂಜೆಯಲ್ಲಿ ಯಾವುದೇ ಮುಸ್ಲಿಂ ಸಮುದಾಯದವರಿಗೆ ಅಂಗಡಿ/ಸ್ಟಾಲ್‌ಗಳನ್ನು ನಡೆಸಲು ಅವಕಾಶ ಕೊಡಬಾರದು ಒಂದು ವೇಳೆ ಮುಸ್ಲಿಂ ಸಮುದಾಯದವರಿಗೆ ಅಂಗಡಿ/ಸ್ಟಾಲ್‌ಗಳನ್ನು ನಡೆಸಲು ಅವಕಾಶಕೊಟ್ಟರೆ ಅದರಿಂದ ಉಂಟಾಗುವ ಯಾವುದೇ ತೊಂದರೆ ಅಥವಾ ಅನಾಹುತಗಳಿಗೆ ನೀವೆ ಜವಾಬ್ದಾರರು ಅಂತ ಎಚ್ಚರಿಕೆ ನೀಡಲಾಗಿದೆ.  ಪತ್ರದಲ್ಲಿ ಯಾವುದೇ ಅಧಿಕೃತ ವ್ಯಕ್ತಿಗಳ ಸಹಿ ಇಲ್ಲದೆ ಇದ್ದು ಸದ್ಯ ಮನವಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Ads on article

Advertise in articles 1

advertising articles 2