
ಉಡುಪಿ-ಬಸ್- ಸ್ಕೂಟರ್ ಢಿಕ್ಕಿ ;ತಂದೆ ಮಗಳು ಸಾವು
ಬಸ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ತಂದೆ - ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಸಂತೆಕಟ್ಟೆಯಲ್ಲಿ ಇಂದು ಮುಂಜಾನೆ ನಡೆದಿದೆ.
ಗಣೆಶ್ ಪೈ (೫೮), ಮಗಳು ಗಾಯತ್ರಿ ಪೈ ಮೃತ ದುರ್ದೈವಿಗಳು.
ಹುಬ್ಬಳ್ಳಿಯಿಂದ ಆಗಮಿಸಿದ್ದ ಮಗಳನ್ನು ಕರೆದುಕೊಂಡು ಹೋಗಲು ಇಂದು ಮುಂಜಾನೆ ತನ್ನ ಸ್ಕೂಟರ್ ನಲ್ಲಿ ಬಂದಿದ್ದ ತಂದೆ ಗಣೇಶ್ ಪೈ, ಮಗಳು ಗಾಯತ್ರಿ ಪೈ ತನ್ನ ಸ್ಕೂಟರ್‌ನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಜಂಕ್ಷನ್ ನಲ್ಲಿ ಕೊಲ್ಲೂರಿಗೆ ತೆರಳುತ್ತಿದ್ದಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ತಂದೆ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..