B R SHETTY ಉಡುಪಿಯಲ್ಲಿ ಕಟ್ಟಿದ ಆಸ್ಪತ್ರೆ ಸರಕಾರದ ಸುಪರ್ದಿಗೆ
Thursday, March 31, 2022
ಉಡುಪಿ ಜಿಲ್ಲೆಯಷ್ಟೇ ಅಲ್ಲದೇ, ಬಡವರಿಗೆ ಐಷಾರಾಮಿ ಆರೋಗ್ಯ ಸೇವೆ ನೀಡುತ್ತಿದ್ದ, ಉದ್ಯಮಿ ಬಿ.ಆರ್ ಶೆಟ್ಟಿ ಕಟ್ಟಿಸಿದ ಆಸ್ಪತ್ರೆ ಸದ್ಯ ಸರ್ಕಾರದ ಸುರ್ಪದಿಗೆ ಬಂದಿದೆ.
ಖಾಸಗಿಯವರ ನಿರ್ವಹಣೆಯಿಂದ ದುಃಸ್ಥಿತಿಗೆ ಒಳಗಾಗಿದ್ದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಇದನ್ನು ಇಂದು ದಿನಾಂಕ 30-03-2022 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಸ್ಪತ್ರೆಯ ನಿರ್ವಹಣೆ ಸರ್ಕಾರಕ್ಕೆ ಹಸ್ತಾಂತರ ಮಾಡಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.
200 ಬೆಡ್ ಗಳ ಈ ಆಸ್ಪತ್ರೆಗೆ ಪ್ರಸ್ತುತ ಇರುವ ಎಲ್ಲಾ ಸಿಬ್ಬಂದಿಗಳ ಸಹಿತ 103 ಮಂದಿ ಹೆಚ್ಚುವರಿ ಸಿಬ್ಬಂದಿ ಹಾಗೂ ವಾರ್ಷಿಕ ಅನುದಾನ ರೂ. 9.83 ಕೋಟಿಗೆ ಅನುಮೋದನೆ ನೀಡಲಾಗಿದೆ. ಉಡುಪಿಯ ಹಳೆಯ ಸರಕಾರಿ ಆಸ್ಪತ್ರೆಯ ಜಾಗವನ್ನು ಉದ್ಯಮಿ ಬಿ.ಆರ್ ಶೆಟ್ಟಿಗೆ ನೀಡಿ, ಈ ಆಸ್ಪತ್ರೆಯನ್ನು ಬಿ.ಆರ್ ಶೆಟ್ಟಿ ನಡೆಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ನಿರೀಕ್ಷೆಯಂತೆಯೇ ಇಲ್ಲಿ ಬಡ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿತ್ತು. ಹನ್ನೊಂದು ಸಾವಿರದಷ್ಡು ಉಚಿತ ಹೆರಿಗೆ ಆದ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಆದ್ರೆ ಉದ್ಯಮಿ ಬಿ.ಆರ್ ಶೆಟ್ಟರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಪರಿಣಾಮ ಈ ಆಸ್ಪತ್ರೆಯ ನಿರ್ವಹಣೆಯೇ ಈಗ ಕಷ್ಟವಾಗಿ ಸಿಬ್ಬಂದಿ ಮತ್ತು ವೈದ್ಯರಿಗೆ ಸಂಬಳ ನೀಡುವುದಕ್ಕೇ ಬಿ.ಆರ್ ಎಸ್ ಮ್ಯಾನೇಜ್ ಮೆಂಟಿಗೆ ಸಾಧ್ಯವಾಗುತ್ತಿರಲಿಲ್ಲ. ಇದರ ಪರಿಣಾಮವಾಗಿ ಇಲ್ಲಿಯ ಸಿಬ್ಬಂದಿಗಳು ಹಲವು ಬಾರಿ ಕರ್ತವ್ಯ ಮಾಡದೆ ವೇತನಕ್ಕಾಗಿ ಧರಣಿ ನಡೆಸಿದ್ರು, ಸದ್ಯ ಸರ್ಕಾರದ ಸುರ್ಪದಿಗೆ ಬಂದಿದ್ದರಿಂದ ಸಾರ್ವಜನಿಕರು ಸಂಸತ ವ್ಯಕ್ತಪಡಿಸಿದ್ದಾರೆ..