-->
ಉಡುಪಿಯಲ್ಲಿ ಭಯಾನಕ  ಮೀನು ಪತ್ತೆ! ಇದರ ತೂಕವೆ 800 ಕೆಜಿ!

ಉಡುಪಿಯಲ್ಲಿ ಭಯಾನಕ ಮೀನು ಪತ್ತೆ! ಇದರ ತೂಕವೆ 800 ಕೆಜಿ!


ಉಡುಪಿಯ ಮಲ್ಪೆ  ಭಯಾನಕವಾಗಿ ಕಾಣುವ ಅಪರೂಪದ ಮೀನು ಪತ್ತೆಯಾಗಿದೆ.  

ಗಾತ್ರ ಮಾತ್ರವಲ್ಲ ನೋಡಲು ಕೂಡ ಭಯಾನಕವಾಗಿ ತೋರುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ.  ಇದು ಸುಮಾರು 800 ಕೆ ಜಿ ತೂಕವಿತ್ತು.




ಮೀನು ಹಿಡಿಯಲು ತೆರಳಿದ್ದ  ಸೀ ಕ್ಯಾಪ್ಟನ್ಎಂಬ ಲೈಲ್ಯಾಂಡ್ ಬೋಟಿನವರು ಬೀಸಿದ ಬಲೆಯಲ್ಲಿ ಭಾರಿಗಾತ್ರದ ಮೀನು ಸಿಲುಕಿದೆ. ಮಲ್ಪೆ ಬಂದರಿಗೆ ಬಂದು ಬೋಟಿನ ಮೀನುಗಳನ್ನು ಇಳಿಸುವ ವೇಳೆ ಬಲೆಯೊಳಗೆ ಬೃಹತ್ ಗಾತ್ರದ ಮೀನು ಪತ್ತೆಯಾಗಿದೆ. ಸ್ಥಳೀಯ ಭಾಷೆಯಲ್ಲಿ ಗರಗಸ ಮೀನು ಎಂದು ಕರೆಯಲಾಗುವ ಈ ಮೀನಿಗೆ ಗರಗಸ ಶಾರ್ಕ್ ಎಂದೂ ಹೇಳುತ್ತಾರೆ. 

ಹತ್ತು ಅಡಿಗೂ ಅಧಿಕ ಉದ್ದದ ಮೀನಿನ, ಬಾಯಿಂದ 
ಗರಗಸ ಮಾದರಿಯ, ಮೊನಚಾದ ಹಲ್ಲುಗಳು ಹೊರ ಬಂದಿವೆ. ಕ್ರೈನ್ ಮೂಲಕ ಎತ್ತಿ, ಸದ್ಯ ಈ ಮೀನಿನ ವಿಲೇವಾರಿ ಮಾಡಲಾಗಿದೆ.

 ಅಪಾಯದ ಅಂಚಿನಲ್ಲಿರುವ ಈ ಮೀನನ್ನು, ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಅನುಬಂಧ ೧ ರಲ್ಲಿ ಗುರುತಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article