
UDUPI-ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ರಘಪತಿ ಭಟ್ ಸ್ಪೋಟಕ ದಾಖಲೆ ಬಿಡುಗಡೆ
Wednesday, February 9, 2022
ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ಕಿಚ್ಚು ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು,
ಸದ್ಯ ರಾಷ್ಟ್ರ ಮಟ್ಟದ ಸುದ್ದಿಯಾಗುತ್ತಿದೆ.
ಹಿಜಾಬ್ ವಿವಾದ ಆರಂಭವಾದ ಉಡುಪಿ ಸರ್ಕಾರಿ ಪಿಯು ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ವಿರುದ್ಧ ಉಡುಪಿ ಶಾಸಕ ರಘಪತಿ ಭಟ್ ದಾಖಲೆ ಬಹಿರಂಗ ಮಾಡಿದ್ದಾರೆ. ವಿದ್ಯಾರ್ಥಿನಿಯರ ಪೈಕಿ ಆಲಿಯಾ ಬಾನು 2021-2022 ಸಾಲಿನ ಕಾಲೇಜಿನ ವಿದ್ಯಾರ್ಥಿ ಸಂಘದಲ್ಲಿ ಇಂಟ್ಯಾರಾಕ್ಟ್ ಕ್ಲಬ್ ನ ಸಂಚಾಲಕಿಯಾಗಿದ್ದು,ಆಕೆ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಹಿಜಾಬ್ ಧರಿಸಿರಲಿಲ್ಲ ಅಂತ ಪೋಟೋ ಬಿಡುಗಡೆ ಮಾಡಿದ್ದಾರೆ.
ಈ ದಾಖಲೆಗಳನ್ನು ಹೈ ಕೋರ್ಟ್ ಗೂ ಸಲ್ಲಿಕೆ ಮಾಡಿದ್ದು,ಕಾಲೇಜಿನಲ್ಲಿ ಈ ಹಿಂದೆಯಿಂದ ಕಾಲೇಜಿನಲ್ಲಿ ಹಿಜಾಬ್ ಧರಿಸೋಕೆ ಅವಕಾಶ ಇರಲಿಲ್ಲ ಅಂತ ಶಾಸಕ ರಘಪತಿ ಭಟ್ ಹೇಳಿದ್ದಾರೆ.
2002ರಿಂದ ಕಾಲೇಜಿನ ಎಲ್ಲಾ ಕಾರ್ಯಕ್ರಮ ಗಳ ದಾಖಲಾತಿಗಳು ಇದ್ದು, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಲ್ಲ. ಕಾಲೇಜಿನಲ್ಲಿ ಹಿಜಾಬ್ ಧರಿಸದೇ, ಸಮಾನ ವಸ್ತ್ರಸಂಹಿತೆಯಲ್ಲಿ ವಿದ್ಯಾರ್ಥಿನಿಯರು ಭಾಗಿಯಾಗಿ, ಕಾಲೇಜಿನ ಅಸೆಂಬ್ಲಿ ವೇಳೆಯಲ್ಲೂ ವಿದ್ಯಾರ್ಥಿನಿ ಯರು ಹಿಜಾಬ್ ಧರಿಸಿಲ್ಲ ಅಂತ ಶಾಸಕ ರಘಪತಿ ಭಟ್ ದಾಖಲೆ ಬಿಡುಗಡೆ ಮಾಡಿದ್ದಾರೆ.