
UDUPI- ಹಾವನ್ನೇ ಹೋಲುವ ಅಪರೂಪ ಮೀನು (Video)
ಬಾವಿ ಸ್ಚಚ್ಚಗೊಳಿಸುವ ವೇಳೆ ಹಾವಿನಾಕೃತಿಯ ಅಪರೂಪದ ನಾಲ್ಕು ಮೀನುಗಳು ಪತ್ತೆಯಾದ ಘಟನೆ ಉಡುಪಿಯ ಪರ್ಕಳ ಎಂಬಲ್ಲಿ ನಡೆದಿದೆ.
ಪರ್ಕಳ ಹೆರ್ಗ ಸಹಕಾರಿ ಸೇವಾ ಸಂಘದ ಆವರಣ ಬಾವಿಯಲ್ಲಿ ಬಾವಿಯಲ್ಲಿ ಹೂಳು ತುಂಬಿಕೊಂಡಿತ್ತು. ಹೀಗಾಗಿ ಇಬ್ಬರು ಸ್ಥಳೀಯ ಕೂಲಿ ಕಾರ್ಮಿಕರು ಬಾವಿಯಿಂದ ಹೂಳು ತೆಗೆಯುತ್ತಿದ್ದಾಗ, ನಾಲ್ಕು ಹಾವಿನ್ನೇ ಹೋಲುವ ಮೀನುಗಳು ಪತ್ತೆಯಾಗಿದೆ.
ಮೊದಲು ಇದನ್ನು ಹಾವು ಅಂದುಕೊಂಡರೂ ತಲೆ ಭಾಗವನ್ನು ನೋಡಿ ಇದು ಮೀನು ಅಂತ ದೃಡಪಡಿಸಿ ಬಾವಿಯಿಂದ ಮೇಲಕ್ಕೆ ಎತ್ತಲಾಯಿತು. ಸದ್ಯ ಈ ಮೀನನ್ನು ಪರ್ಕಳದ ಸೆಲೂನ್‌ನ ಅಕ್ವೇರಿಯಂನಲ್ಲಿ ಇಡಲಾಗಿದ್ದು, ಅಪರೂಪ ಜಾತಿಯ ಮೀನನ್ನು ನೋಡಲು ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ಅಲ್ಲದೇ ಮೀನುಗಾರಿಕಾ ಕಾಲೇಜಿನ ಉಪನ್ಯಾಸಕರಿಗೂ ಪೋಟೋ ಕಳುಹಿಸಲಾಗಿದ್ದು, ಯಾವ ತಳಿಯ ಮೀನು ಅಂತ ಇನಷ್ಟೇ ದೃಡ ಪಡಬೇಕಿದೆ..