
ಪಲ್ಲಂಗದಾಟ ಆಡಿದ ರಘುಪತಿ ಭಟ್ ನಮಗೆ ಕಲಿಸುವ ಅಗತ್ಯವಿಲ್ಲ- SDPI
ರಾಜ್ಯದಲ್ಲಿ ಹಿಜಾಬ್ ವಿವಾದ ಮುಂದುವರಿದಿದ್ದು, ಇದೇ ವಿಚಾರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಹಿಜಾಬ್ ವಿರುದ್ಧ ಗಟ್ಟಿಯಾಗಿ ನಿಂತಿರುವ ರಘುಪತಿ ಭಟ್ ವಿರುದ್ಧ, ಪಲ್ಲಂಗದಾಟ ವಾಡಿದ ರಘುಪತಿ ಭಟ್ ನಮಗೆ ಕಲಿಸುವ ಅಗತ್ಯ ಇಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.
ರಘುಪತಿ ಭಟ್ ಶಾಸಕರಾಗಲು ಅನರ್ಹ, ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡಬೇಡಿ
ರಘುಪತಿ ಭಟ್ ಒಬ್ಬ ಅಜ್ಞಾನಿ ಶಾಸಕ ಸಣ್ಣ ಪ್ರಕರಣ ಇಡೀ ಅಂತಾರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಲು ಶಾಸಕರೇ ಕಾರಣ ಅಂತ ಆರೋಪಿಸಿದ್ದಾರೆ.
ಮಧ್ಯಂತರ ಆದೇಶದಲ್ಲಿ ಬಹಳ ಸ್ಪಷ್ಟವಾಗಿದೆ. ಆಡಳಿತ ಮಂಡಳಿ ಯುನಿಫಾರ್ಮ್ ಕಡ್ಡಾಯ ಮಾಡಿದರೆ ಮಾತ್ರ ಪಾಲಿಸಬೇಕು ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ ಆದರೂ ಹಲವೆಡೆ ಈ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಮುಸಲ್ಮಾನ ವಿದ್ಯಾರ್ಥಿಗಳನ್ನು ಗೇಟಲ್ಲೇ ತಡೆಯಲಾಗಿದೆ ಅಂತ ಹೇಳಿದರು. ದೇಶದಲ್ಲಿ ಬಿಕಿನಿ ಹಾಕಿ ಕೂಡ ಹೋಗ್ತಾರೆ ಅರ್ಧ ಬಟ್ಟೆ ಹಾಕಿ ಹೋಗ್ತಾರೆ ಅದು ಅವರ ವೈಯಕ್ತಿಕ ವಿಷಯ ಹಾಗೆ ಹೀಗಾಗಿ ಹಿಜಾಬ್ ವೈಯಕ್ತಿಕ ಹಕ್ಕು. ಪಾಕಿಸ್ತಾನಕ್ಕೆ ಹೋಗಿ ಅಪಘಾನಿಸ್ತಾನಕ್ಕೆ ಹೋಗಿ ಹೇಳುವವರು ಅಲ್ಲಿಗೆ ಹೋಗಿ, ನಾವು ಹುಟ್ಟಿದ್ದು ಇಲ್ಲಿ, ಇಲ್ಲೇ ಸಾಯುತ್ತೇವೆ ಅಂತ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ ನೀಡಿದ್ದಾರೆ..