ಮಂಗಳೂರಿನಿಂದ ಮಂಜೇಶ್ವರಕ್ಕೂ ವ್ಯಾಪಿಸಿದ ಅನೈತಿಕ ಪೊಲೀಸ್‌ಗಿರಿ -ಜೊತೆಗಿದ್ದ ಭಿನ್ನಧರ್ಮದ ವಿದ್ಯಾರ್ಥಿಗಳಿಗೆ ಹಲ್ಲೆ
Tuesday, February 15, 2022
ಮಂಜೇಶ್ವರ: ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಂಡು ಬರುತ್ತಿದ್ದ ಭಿನ್ನ ಜೋಡಿಗಳ ಮೇಲಿನ ಹಲ್ಲೆ ಪ್ರಕರಣ ಇದೀಗ ನೆರೆಯ ಕೇರಳಕ್ಕೂ ಕಾಲಿಟ್ಟಿದೆ.
ರೈಲು ನಿಲ್ದಾಣದಲ್ಲಿ ನಿಂತಿದ್ದ ವಿಭಿನ್ನ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣ ಮಂಜೇಶ್ವರ ರೈಲು ನಿಲ್ದಾಣದಲ್ಲಿ ನಡೆದಿದೆ.
ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿರುವ ನಿಲೇಶ್ವರದ ಅಶ್ವತಿ ಮತ್ತು ನಿಝಾರ್ ಜೊತೆಯಾಗಿ ಕಾಲೇಜಿನಿಂದ ಹೊರಟಿದ್ದು, ಬಳಿಕ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಆಗಮಿಸಿದ ಗುಂಪು ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದೆ.
ಹಲ್ಲೆಗೊಳಗಾದ ಯುವತಿಯು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.