"ಚರ್ಮಕ್ಕೆ ಚರ್ಮ ತಾಕಿದರೆ ಮಾತ್ರ ಲೈಂಗಿಕ ದೌರ್ಜನ್ಯ" ತೀರ್ಪು ನೀಡಿದ್ದ Judge ಪುಷ್ಪಾ ಗನೇಡಿವಾಲಾ ರಾಜೀನಾಮೆ
Saturday, February 12, 2022
ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚರ್ಮಕ್ಕೆ ಚರ್ಮ ತಾಕಿದರೆ ಮಾತ್ರವೇ ಲೈಂಗಿಕ ದೌರ್ಜನ್ಯವಾಗುತ್ತದೆ ಎಂಬ ವಿವಾದಾತ್ಮಕ ತೀರ್ಪು ನೀಡಿದ್ದ ಮುಂಬಯಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ರಾಜೀನಾಮೆ ನೀಡಿದ್ದಾರೆ .
ಹೆಚ್ಚುವರಿ ನ್ಯಾಯಮೂರ್ತಿ ಯಾಗಿ ಸೇವಾವಧಿ ಪೂರ್ಣಗೊಳ್ಳಲು ಎರಡು ದಿನ ಇರುವಾಗ ಅವರು ರಾಜೀನಾಮೆ ನೀಡಿದ್ದಾರೆ . ' ' ಚರ್ಮಕ್ಕೆ ಚರ್ಮ ತಾಕಿದರೆ ಮಾತ್ರವೇ ಲೈಂಗಿಕ ದೌರ್ಜನ್ಯವಾಗುತ್ತದೆ , ' ' ಎಂದು ಪುಷ್ಪಾ ಅವರು ನೀಡಿದ ತೀರ್ಪು ವಿವಾದಕ್ಕೆ ಕಾರಣವಾಗಿತ್ತು . ವಿವಾದಿತ ತೀರ್ಪಿನ ಕಾರಣದಿಂದ ಪುಷ್ಪಾ ಅವರನ್ನು ಹೈಕೋರ್ಟ್‌ನ ಕಾಯಂ ಮೂರ್ತಿಯಾಗಿ ನೇಮಕ ಮಾಡಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಕೊಲಿಜಿಯಂ , 2021 ರ ಫೆ .13 ರಂದು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಿತ್ತು .
ನ್ಯಾಯಾಂಗ ಸೇವೆಯಿಂದ ಬಿಡುಗಡೆ ಹೊಂದಿದ ಬಳಿಕ , 53 ವರ್ಷದ ಪುಷ್ಪಾಗನೇಡಿವಾಲಾ ಅವರು ಕಾನೂನು ಸಲಹಾ ಸಂಸ್ಥೆಯೊಂದಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ .