ಉಡುಪಿಯಲ್ಲಿ ಸಮುದ್ರಪಾಲಾದ ಯುವಕನ ಮೃತದೇಹ ಪತ್ತೆ
Monday, February 21, 2022
ಗೆಳೆಯರೊಂದಿಗೆ ಕಡಲಿಗೆ ಈಜಲು ಹೋಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಉಡುಪಿಯ ಪಡುಬಿದ್ರಿ ಬೀಚ್‌ನಲ್ಲಿ
ಪತ್ತೆಯಾಗಿದೆ.
ಪಡುಬಿದ್ರಿ ನಡ್ಡಾಲು ಅಡಿಪುತೋಟ ನಿವಾಸಿ ರಘುರಾಮ ದೇವಾಡಿಗ ಅವರ ಪುತ್ರ ಧನುಷ್ (19) ಮೃತ ದುರ್ದೈವಿ. ಮೃತದೇಹ ಪಡುಬಿದ್ರಿ ಕಾಡಿಪಟ್ಣ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಫೆ 19 ರಂದು ಧನುಷ್ ಗೆಳೆಯರೊಂದಿಗೆ ಈಜಲು ಹೋಗಿದ್ದ, ಈ ವೇಳೆ ಸಮುದ್ರದ ಅಲೆಯ ಅಬ್ಬರಕ್ಕೆ ಸಿಲುಕಿ ಮೂವರು ಸಮುದ್ರ ಪಾಲಾಗುತ್ತಿದ್ದರು, ಕೂಡಲೇ ಧಾವಿಸಿದ ಸ್ಥಳೀಯರು ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು.
ಆದರೆ ಧನುಷ್ ನಾಪತ್ತೆಯಾಗಿದ್ದ, ಇಂದು ಧನುಷ್ ಮೃತದೇಹ ಪತ್ತೆಯಾಗಿದ್ದು,
ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ಬಿಟ್ಟುಕೊಡಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.