ಹಿಜಾಬ್ ವಿವಾದಕ್ಕೆ ರಘುಪತಿ ಭಟ್ ಕಾರಣ - CFI
Wednesday, February 9, 2022
ಹಿಜಾಬ್ ವಿವಾದಕ್ಕೆ ಪ್ರಮುಖ ಕಾರಣ ಉಡುಪಿ ಶಾಸಕ ರಘಪತಿ ಭಟ್ , ಇವರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ  ಹೋಗಿದೆ  ಅಂತಾ ಉಡುಪಿಯಲ್ಲಿ ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಪೂಂಜಾಲಕಟ್ಟೆ ಹೇಳಿದ್ದಾರೆ. 
ಉಡುಪಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಅವರು, ಸಣ್ಣ ವಿಷಯವನ್ನು ಶಾಸಕ ರಘಪತಿ ಭಟ್ ಮತ್ತು ಬಿಜೆಪಿ, ಸಂಘಪರಿವಾರ  ಚುನಾವಣೆಯ ದೃಷ್ಠಿಯಿಂದ  ವಿವಾದವಾಗಿ ಮಾಡಿದ್ದಾರೆ..ಹಿಂದೂ-ಮುಸ್ಲಿಂ ವಿಭಜನೆ ಮಾಡುವ ಮೂಲಕ ತಮ್ಮ ಮತ ಬ್ಯಾಂಕ್ ಭಧ್ರ ಮಾಡಿಕೊಳ್ಳುತ್ತಿದ್ದಾರೆ ಅಂತಾ ಅತಾವುಲ್ಲಾ ಪೂಂಜಾಲಕಟ್ಟೆ ನೇರ ಆರೋಪ ಮಾಡಿದ್ದಾರೆ.
 ವಿವಾದವನ್ಜು  ಕ್ಯಾಂಪಸ್ ಪ್ರಂಟ್  ಆಫ್ ಇಂಡಿಯಾ ದ ತಲೆಗೆ ಕಟ್ಟುತ್ತಿದ್ದಾರೆ..ಸರ್ಕಾರ ಜವಾಬ್ದಾರಿಯಿಂದ  ನುಣುಚಿಕೊಳ್ಳುತ್ತಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ನೀಡಿ ವಿಭಜಿಸಿದೆ..ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ಮೇಲೆ  ದಾಳಿ ಮಾಡಲಾಗಿದೆ.. ಕಛೇರಿಯ ರಾಷ್ಟ್ರಧ್ವಜ ಸ್ತಂಭ ದಲ್ಲಿ  ಭಗವಾಧ್ವಜ ಹಾರಿಸಿದ್ದಾರೆ. ಮಡಿಕೇರಿಯಲ್ಲಿ ಕೇಸರಿ ಶಾಲು ಧರಿಸಲು ಒಪ್ಪದ ವಿದ್ಯಾರ್ಥಿ ಗಳ ಮೇಲೆ ಚೂರಿ ಇರಿಸಲಾಗಿದೆ ಅಂತ ಹೇಳಿದರು. ಕೋರ್ಟ್ ತೀರ್ಪು ವಿರುದ್ಧ ಬಂದರೆ ಸುಪ್ರೀಂ  ಕೋರ್ಟ್ ಗೆ ಹೋಗೋದಾಗಿ ಅತಾವುಲ್ಲಾ ತಿಳಿಸಿದರು..