ತನ್ನ ಮದುವೆಯನ್ನು ರದ್ದುಗೊಳಿಸಿದರು ಈ ದೇಶದ ಪ್ರಧಾನಿ!
Sunday, January 23, 2022
ನ್ಯೂಜಿಲೆಂಡ್: Covid ರೂಪಾಂತರಿ omicron ನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾರೆ.
ಈ ಬಗ್ಗೆ ಇಂದು ಹೇಳಿಕೆ ನೀಡಿದ ಜಸಿಂಡಾ ಅರ್ಡೆರ್ನ್
ಅವರು ನನ್ನ ಮದುವೆ ರದ್ದುಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ. ರಾಷ್ಟ್ರದ ಇತರ ಪ್ರಜೆಗಳಂತೆ ನಾನೂ ಕೂಡ ಈ ವೈರಸ್ ನ ಪರಿಣಾಮವನ್ನು ಅನುಭವಿಸುತ್ತೇನೆ. ವೈರಸ್ ನಿಂದ ಹೆಚ್ಚು ಸಂಕಷ್ಟಕ್ಕೊಳಗಾದ ದೇಶದ ಸಾವಿರಾರು ಮಂದಿಯಲ್ಲಿ ನಾನೂ ಒಬ್ಬಳಾಗುತ್ತೇನೆ ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ covid ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ವಿವಾಹ ಸಮಾರಂಭಕ್ಕೆ ಪೂರ್ಣವಾಗಿ ಲಸಿಕೆ ಪಡೆದ ನೂರು ಮಂದಿಗೆ ಭಾಗವಹಿಸಲು ಮಾತ್ರ ಅವಕಾಶ ನೀಡಲಾಗಿದೆ. Covid ತಡೆಗಟ್ಟಲು red ಸೆಟ್ಟಿಂಗ್ ನಿರ್ಬಂಧಗಳನ್ನು ನ್ಯೂಜಿಲೆಂಡ್‌ನಲ್ಲಿ ಜಾರಿಗೊಳಿಸಲಾಗಿದ್ದು, ಇದು ಮುಂದಿನ ತಿಂಗಳ ಕೊನೆಯವರೆಗೆ ಜಾರಿಯಲ್ಲಿರುತ್ತದೆ.
ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ತಮ್ಮ ಗೆಳೆಯ ಕ್ಲಾರ್ಕ್ ಗೇಫೋರ್ಡ್ ಅವರ ಜೊತೆಗೆ ಮದುವೆಗೆ ನಿಶ್ಚಯಿಸಿದ್ದರು. ಇದೀಗ ನಿಗದಿಯಾದ ಮದುವೆಯನ್ನು ರದ್ದುಗೊಳಿಸಲಾಗಿದೆ