ವಿಯೆಟ್ನಾಂ ವಧು ಹೊಸಕೊಪ್ಪದ ವರ - ಹಿಂದೂ ಸಂಪ್ರದಾಯದಂತೆ ಮದುವೆ!
Wednesday, December 15, 2021
ಹಾವೇರಿ : ಹಾನಗಲ್ಲ ತಾಲೂಕಿನ ರಾಮ ತೀರ್ಥ- ಹೊಸ ಕೊಪ್ಪ ಗ್ರಾಮದಲ್ಲಿ ಮಂಗಳ ವಾರ ವಿಶೇಷ ಮದುವೆ ರಾಮ ಜರುಗಿತು .
ತೀರ್ಥ ಹೊಸಕೊಪ್ಪ ಗ್ರಾಮದ ವರ ಪ್ರದೀಪ್ ಮತ್ತು ವಿಯೆಟ್ನಾಂ ವಧು ಕ್ಯೂಯಾನ್ ಟ್ರಾಂಗ್ ಮದುವೆ ಹಿಂದೂ ಸಂಪ್ರದಾಯಗಳ ಪ್ರಕಾರ ನೆರವೇರಿತು . ಈ ವಿಶೇಷ ಲಗ್ನಕ್ಕೆ ವಧು ಪ್ರದೀಪ ಬಂಧು ಬಳಗ ಹಾಗೂ ಗ್ರಾಮಸ್ಥರು ಸಾಕ್ಷಿಯಾದರು .
ಗ್ರಾಮದ ಫಕ್ಕೀರಪ್ಪ ಖಂಡನವರ ಅವರ ಸುಮತ್ರ ಪ್ರದೀಪ್ ಕೈಹಿಡಿದ ವಿಯೆಟ್ನಾಂ ಕನೈ , ಭಾರತೀಯ ಸಂಸ್ಕೃತಿಯ ಆಭರಣ , ಉಡುಗೆ ತೊಟ್ಟು ಕಂಗೊಳಿಸಿದಳು . ಸುಮಾರು 8 ವರ್ಷಗಳಿಂದ ಪ್ರದೀಪ್ ವಿಯೆಟ್ನಾಂ ನಿವಾಸಿಯಾಗಿದ್ದಾರೆ . ಅಲ್ಲಿ ಯೋಗ ತರಬೇತಿ ನೀಡುತ್ತಿದ್ದಾರೆ .
ವಿಯೆಟ್ನಾಂ ದೇಶದ ಹೊ ಚಿ ಮೆನ್ ನಗರದ ನಿವಾಸಿ ಕ್ಯೂಯಾನ್ ಟ್ರಾಂಗ್ ಜೊತೆಯಲ್ಲಿ ಇತ್ತೀಚೆಗೆ ವಿವಾಹ ನಿಶ್ಚಯವಾಗಿತ್ತು . ಈ ಜೋಡಿಯ ಮದುವೆ ರಾಜ್ಯದಲ್ಲಿ ನೆರವೇರಿದೆ . ವಧು ಕ್ಯೂಯಾನ್ ಟ್ರಾಂಗ್‌ಗೆ ಕನ್ನಡ ಬಾರದು . ಆದರೆ ಇವರ ಮಮತೆಯ ನಡುವಳಿಕೆಯು ಭಾಷೆಯ ತೊಡಕು ನಿವಾರಿಸಿದೆ . ಇಂಗ್ಲೀಷ್ ಮಾತನಾಡುವ ವಧು ಗ್ರಾಮದಲ್ಲಿ ಉತ್ತಮವಾಗಿ ಹೊಂದಿಕೊಂಡಿರುವುದು ವಿಶೇಷ .