
ಮಂಗಳೂರು; ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಪೂವಮ್ಮ
ಮಂಗಳೂರು: ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಹ ಪೂವಮ್ಮ ಕೇರಳದ ಅಥ್ಲೀಟ್ ಜಿತಿನ್ ಪೌಲ್ ಜತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಮಂಗಳೂರಿನ ಅಡ್ಯಾರ್ ಗಾರ್ಡನ್‌ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಇಂದು ಅವರ ವಿವಾಹ ನೆರವೇರಿತು. ಕೊಡವ ಸಂಪ್ರದಾಯದಂತೆ ನಡೆದ ಮದುವೆ ಯಲ್ಲಿ ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ. ತಮ್ಮಯ್ಯ (ರಾಜು), ತಾಯಿ ಜಾನಕಿ (ಜಾಜಿ), ಜಿತಿನ್ ಅವರ ತಾಯಿ ಜಾನ್ಸಿ ಮೊದಲಾದವರು ಉಪಸ್ಥಿತರಿದ್ದರು.
ಜನವರಿ 1ರಂದು ಕೇರಳದ ತ್ರಿಶೂರ್‌ನಲ್ಲಿ ವಿವಾಹ ಪ್ರಯುಕ್ತ ಮತ್ತೊಂದು ಕಾರ್ಯಕ್ರಮ ಜರುಗಲಿದೆ.