
ಮಂಗಳೂರಿನಲ್ಲಿ MBBS ವಿದ್ಯಾರ್ಥಿನಿ ಆತ್ಮಹತ್ಯೆ ಗೆ ಆತನ ಜತೆಗಿನ ವಿರಸವೆ ಕಾರಣ!
ಮಂಗಳೂರು; ಮಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ಅತ್ಮಹತ್ಯೆ ಮಾಡಿಕೊಳ್ಳಲು ಪ್ರಿಯಕರನ ಜೊತೆಗಿನ ವಿರಸವೆ ಕಾರಣ ಎಂದು ತಿಳಿದುಬಂದಿದೆ.
ಬೀದರ್ ಜಿಲ್ಲೆಯ ವೈಶಾಲಿ ಗಾಯಕ್ ವಾಡ್ (25) ಎಂಬವಳು ಆದಿತ್ಯವಾರ ಮಂಗಳೂರಿನ ಕುತ್ತಾರ್ ನಲ್ಲಿ ಸಿಲೋಸಿನಿಯಾ ಅಪಾರ್ಟ್ ಮೆಂಟ್ ನ ಪ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಇಂಟರ್ನ್ ಶಿಪ್ ಮಾಡುತ್ತಿದ್ದಳು.
ಈಕೆಯ ಸಾವಿಗೆ ಸುಜಿಸ್ ಎಂಬ ಯುವಕನ ಜೊತೆಗಿನ ಮನಸ್ತಾಪವೆ ಕಾರಣ ಎಂದು ತಿಳಿದುಬಂದಿದೆ. ಸುಜಿಸ್ ಕೇರಳದ ಪಾಲಕ್ಕಾಡ್ ಜಿಲ್ಲೆಯವನಾಗಿದ್ದು ಈತ ಈಕೆಯ ಕ್ಲಾಸ್ ಮೇಟ್ ಆಗಿದ್ದಾನೆ. ಈತ ಕೂಡ ಅದೇ ಅಪಾರ್ಟ್ ಮೆಂಟ್ ನ ಪ್ಲ್ಯಾಟ್ ವೊಂದರಲ್ಲಿ ವಾಸವಾಗಿದ್ದ. ಇವರಿಬ್ಬರಲ್ಲಿ ಯಾವುದೋ ವಿಚಾರಕ್ಕೆ ಮನಸ್ತಾಪ ಮೂಡಿದ್ದು ಇದರಿಂದಾಗಿ ನೊಂದ ಆಕೆ ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಸುಜಿಸ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ