ಅಭಿಮಾನಿ ನೀಡಿದ ಕುರಿಯನ್ನು ತಿರಸ್ಕರಿಸಿದ ಸಿದ್ದು: ಗಿಫ್ಟ್ ಬೇಡ ಅನ್ನಲು ಕಾರಣವಾಯ್ತು ಕುರಿಯ ಕತ್ತಿನಲ್ಲಿದ್ದ ಆ ಬೋರ್ಡ್
Thursday, October 14, 2021
ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಗೆ ಅಭಿಮಾನಿಯೋರ್ವ ನೀಡಿದ ಪ್ರೀತಿಯ ಕಾಣಿಕೆಯನ್ನು ಅವರು ನಯವಾಗಿ ತಿರಸ್ಕರಿಸಿದ ಘಟನೆ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.
ಇಲ್ಲಿನ ಜೆ.ಎಂ. ಕೊರಬು ಫೌಂಡೇಶನ್ ನಡೆಸಿದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯರಿಗೆ ಅಭಿಮಾನಿ ರಮೇಶ್ ಎಂಬವರು ಮೇಕೆಯೊಂದನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.
ಆದರೆ ಈ ಮೇಕೆಯನ್ನು ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿದರು. ಯಾಕೆ ಗೊತ್ತಾ? ಮೇಕೆಯ ಕುತ್ತಿಗೆಯಲ್ಲಿ 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಬೋರ್ಡ್ ಹಾಕಲಾಗಿತ್ತು. ಇದರಿಂದ ಸಿದ್ದರಾಮಯ್ಯ ಗಲಿಬಿಲಿಗೊಂಡಿದ್ದು, ಈ ಉಡುಗೊರೆ ಸ್ವೀಕರಿಸಲು ನಿರಾಕರಿಸಿದ್ದಾರೆ.
ವೇದಿಕೆಯಲ್ಲಿದ್ದ ಇತರೆ ಗಣ್ಯರು ಒತ್ತಾಯ ಮಾಡಿದರೂ ಸಹ ಸಿದ್ದರಾಮಯ್ಯ ಮಾತ್ರ ಈ ಉಡುಗೊರೆ ಸ್ವೀಕರಿಸಲು ಸುತಾರಾಂ ಒಪ್ಪಿಲ್ಲ.
ಸಿದ್ದರಾಮಯ್ಯ ಉಡುಗೊರೆ ಸ್ವೀಕರಿಸದ ಹಿನ್ನೆಲೆ ನಿರಾಶೆಯಿಂದ ಅಭಿಮಾನಿ ರಮೇಶ್ ಮೇಕೆಯನ್ನು ವಾಪಸ್ ಕೊಂಡೊಯ್ದಿದ್ದಾರೆ.