ಕೇರಳ ಬಿಜೆಪಿಗೆ ಸರ್ಜರಿ: ಕಾಸರಗೋಡು ಸಹಿತ ಐದು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ: ಕಾಸರಗೋಡಿನ ನೂತನ ಬಿಜೆಪಿ ಅಧ್ಯಕ್ಷರು ಯಾರು ಗೊತ್ತಾ?
Tuesday, October 5, 2021
ತಿರುವನಂತಪುರಂ: ಕೇರಳ ಬಿಜೆಪಿ ಪದಾಧಿಕಾರಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದ್ದು, ಐದು ಜಿಲ್ಲೆಗಳ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡಲಾಗುದೆಂದು ತಿಳಿದುಬಂದಿದೆ.
ಕಾಸರಗೋಡು, ವಯನಾಡ್, ಕೋಟ್ಟಯಂ, ಪಾಲಕ್ಕಾಡ್ ಮತ್ತು ಪತ್ತನಂತಿಟ್ಟ ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದ್ದು, ಕಾಸರಗೋಡಿಗೆ ಕುಂಟಾರು ರವೀಶ್ ತಂತ್ರಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಅಚ್ಚರಿ ಎಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಎಲ್ಲಾ ಕಡೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ನಿಂತ ಕ್ಷೇತ್ರದಲ್ಲಿ ಬಿಜೆಪಿ ಸೋತರೂ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರಿಸಲಾಗಿದೆ.