-->

ಗಂಡನ ಕಳೆದುಕೊಂಡ ಮಾನಸಿಕ ಅಸ್ವಸ್ಥ ಒಂಟಿ ಮಹಿಳೆ ರಕ್ಷಿಸಿ ಪುನರ್ವಸತಿ: ಸಂಬಂಧಿಕರಿಗೆ ಸೂಚನೆ

ಗಂಡನ ಕಳೆದುಕೊಂಡ ಮಾನಸಿಕ ಅಸ್ವಸ್ಥ ಒಂಟಿ ಮಹಿಳೆ ರಕ್ಷಿಸಿ ಪುನರ್ವಸತಿ: ಸಂಬಂಧಿಕರಿಗೆ ಸೂಚನೆ

ಉಡುಪಿ : ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿ ತಿಂಗಳ ಹಿಂದೆ ಗಂಡ ತೀರಿ ಹೋಗಿ ಅಸಹಾಯಕಳಾಗಿ ಮೂಲಭೂತ ಸೌಕರ್ಯ ಏನೂ ಇಲ್ಲದೆ ಗುಡಿಸಲಿನಲ್ಲಿ ವಾಸವಾಗಿದ್ದ ಒಂಟಿ ಮಾನಸಿಕ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಮಂಜೇಶ್ವರದ ಸಾಯಿ ಸೇವಾಶ್ರಮದಲ್ಲಿ ದಾಖಲಿಸಿದ ಘಟನೆ ಸೆ.25ರಂದು ನಡೆದಿದೆ. ರಕ್ಷಣಾ ಕಾರ್ಯದಲ್ಲಿ ರವೀಂದ್ರ Shetty ಹೇರೂರು ಹಾಗೂ ಸಾಮಾಜಿಕ ಕಾರ್ಯಕರ್ತೆ ಶಕೀಲಾ ಕಟಪಾಡಿ ಸಹಕರಿಸಿದರು. 

ಮಹಿಳೆ ಸುನಂದಾ ಶೆಟ್ಟಿ (48ವರ್ಷ) ಮಾನಸಿಕ ಅಸ್ವಸ್ಥ ಮಹಿಳೆಯಾಗಿದ್ದು ತಿಂಗಳ ಹಿಂದೆ ಈಕೆಯ ಪತಿ ಅವಘಡವೊಂದರಲ್ಲಿ ಮೃತಪಟ್ಟಿದ್ದಾರೆ. ಈಕೆ ವಿದ್ಯುತ್ ಸಂಪರ್ಕ ಹಾಗೂ ಶೌಚಾಲಯವೂ ಇಲ್ಲದ ಗುಡಿಸಲಿನಲ್ಲಿ ವಾಸ. ಪತಿ ತೀರಿದ ಬಗ್ಗೆ ಮಹಿಳೆಗೆ ಇನ್ನೂ ವಿಷಯ ತಿಳಿಯದೆ, ಪತಿ ತಿರುಗಾಡಲು ಹೋಗಿದ್ದಾರೆ ಎನ್ನುತ್ತಾಳೆ. ರಸ್ತೆ ಬದಿ ಹೊರಗಡೆ ತಿರುಗಾಡುವುದು ಹಾಗೂ ಒಂಟಿ ಮಹಿಳೆ ಅಸಹಾಯಕತೆಯಿಂದ ದುರಂತ ಸಂಭವಿಸಬಹುದು.

 ಸ್ಥಳೀಯರು ರಕ್ಷಣೆ ಬಗ್ಗೆ ವಿಶು ಶೆಟ್ಟಿಯವರಲ್ಲಿ ವಿನಂತಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ವಿಶು ಶೆಟ್ಟಿ ಮಹಿಳೆಯ ದುಸ್ಥಿತಿ ನೋಡಿ ಪುನರ್ವಸತಿ ಹಾಗೂ ಔಷದೋಪಚಾರದ ಸಲಹೆಗೆ ಸಾಯಿ ಸೇವಾಶ್ರಮದ ಮುಖ್ಯಸ್ಥರಾದ ಡಾ. ಉದಯ ಕುಮಾರ್ ರವರಲ್ಲಿ ನೆರವು ಯಾಚಿಸಿದರು. ಸ್ಪಂದಿಸಿದ ಆಶ್ರಮದವರು ಆಶ್ರಯ ನೀಡಲು ಅನುಮತಿ ನೀಡಿದಾಗ ವಿಶು ಶೆಟ್ಟಿಯವರು ಮಹಿಳೆಯನ್ನು ವಶಕ್ಕೆ ಪಡೆದು,  ತಮ್ಮದೇ ವಾಹನದಲ್ಲಿ ಕರೆದುಕೊಂಡು ಹೋಗಿ  ಮಂಜೇಶ್ವರದ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದಾರೆ. 

ಮಹಿಳೆಗೆ ನೆರವು ನೀಡುವವರು ಹಾಗೂ ಸಂಬಂಧಿಕರು ಡಾ. ಉದಯ ಕುಮಾರ್ (9645126739) ರವರನ್ನು ಸಂಪರ್ಕಿಸಬಹುದು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99