ಆರನೇ ಸೆಮಿಸ್ಟರ್ ಪರೀಕ್ಷೆ ರದ್ದತಿಗೆ ಆಗ್ರಹಿಸಿ NSUI ಪ್ರತಿಭಟನೆ
Friday, September 24, 2021
ಮಂಗಳೂರು: ಪರೀಕ್ಷಾ ಶುಲ್ಕ ಕಡಿಮೆ, ಆರನೇ ಸೆಮಿಸ್ಟರ್ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ನೇತೃತ್ವದಲ್ಲಿ ಶುಕ್ರವಾರ ಕೋಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಎದುರು ಪ್ರತಿಭಟನೆ ನಡೆಯಿತು.
ಬಳಿಕ ಸವಾದ್ ಸುಳ್ಯ ಮಾತನಾಡಿ, ಕೋವಿಡ್ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗ ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಬೇಕು. ಪ್ರಸ್ತುವ 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಕಲಿಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಎನ್.ಎಸ್.ಯು.ಐ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಪವನ್ ಸಾಲ್ಯಾನ್, ಯುವ ಮುಖಂಡ ನೌಫಲ್ ಅಬ್ದುಲ್ಲಾ, ಜಿಲ್ಲಾ ಪದಾಧಿಕಾರಿಗಳಾದ ನಿಖಿಲ್ ಶೆಟ್ಟಿ, ಶೋನಿತ್ ಬಂಗೇರ, ಶಾನ್ ಸಿರಿ, ರಿಲ್ವಾನ್ ಅಮ್ಮೆಮ್ಮಾರ್, ಅಬ್ದುಲ್ ರಾಝೀ, ಅಯಾನ್, ಎನ್.ಎಸ್.ಯು.ಐ ಪುತ್ತೂರು ತಾಲೂಕು ಅಧ್ಯಕ್ಷ ಕೌಶಿಕ್ ಗೌಡ ಕುದ್ವಾ, ಎನ್.ಎಸ್.ಯು.ಐ ಉಳ್ಳಾಲ ತಾಲೂಕು ಅಧ್ಯಕ್ಷ ಅಹ್ನಾಫ್ ಡೀಲ್ಸ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆ ನಿರತಾ ವಿದ್ಯಾರ್ಥಿ ನಾಯಕರನ್ನು ಪೋಲಿಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.