ಪಾಳು ಬಾವಿಯಲ್ಲಿ ಮೂವರು ಗಂಡಂದಿರ ಪತ್ನಿಯ ಶವಪತ್ತೆ.. ಇದು ಕೊಲೆಯೋ..? ಆತ್ಮಹತ್ಯೆಯೋ....?
Monday, September 6, 2021
ಚಿಕ್ಕಬಳ್ಳಾಪುರ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ಮುಸಲ್ಮಾನರ ಹಳ್ಳಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಶಿಲ್ಪಾ ಮುಬಾರಕ್ ಎಂದು ಗುರುತಿಸಲಾಗಿದೆ. ಶಿಲ್ಪಾ ಮೂರು ಮದುವೆಯಾಗಿದ್ದು, ಇಬ್ಬರು ಗಂಡಂದಿರನ್ನ ಕಳೆದುಕೊಂಡಿದ್ದಾರೆ.ಈಕೆ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬಾವಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿ ಬಾವಿಗೆ ಬೀಸಾಕಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಶಿಲ್ಪಾ ಮನೆಯ ಗೋಡೆ ಮೇಲೆ ಐ ಮಿಸ್ ಯೂ ವಿ ಅಂತಾ ಬರೆಯಲಾಗಿದೆ.
ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.