ವಿವೊದಿಂದ Y12G ನೂತನ ಫೋನ್ ಮಾರುಕಟ್ಟೆಗೆ ಬಿಡುಗಡೆ
Friday, August 6, 2021
ಬೆಂಗಳೂರು: ವಿವೊ ನೂತನ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ವೈ ಸರಣಿಯಲ್ಲಿ ವಿವೊ Y12G ಗ್ಯಾಜೆಟ್ ಕ್ಷೇತ್ರಕ್ಕೆ ಬಿಡುಗಡೆಯಾಗಿದೆ. ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಜತೆಗೆ ಬಜೆಟ್ ದರದಲ್ಲಿ ವಿವಿಧ ಫೀಚರ್‌ಗಳನ್ನು ಪರಿಚಯಿಸಿದೆ.
ಹಿಂಭಾಗದಲ್ಲಿ ಎರಡು ಕ್ಯಾಮರಾಗಳಿರುವ ಈ ಫೋನ್ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. 3 ಜಿಬಿ ರ್ಯಾಮ್ + 32 ಜಿಬಿ ಸ್ಟೋರೇಜ್ ಹೊಂದಿದ್ದು, ಭಾರತದಲ್ಲಿ 10,990 ರೂ. ದರವಿದೆ.
ಗ್ಲೇಸಿಯರ್ ಬ್ಲೂ ಮತ್ತು ಫ್ಯಾಂಟಮ್ ಬ್ಲ್ಯಾಕ್ ಎನ್ನುವ ಎರಡು ಬಣ್ಣಗಳಲ್ಲಿ ಹೊಸ ವಿವೊ Y12G ದೊರೆಯಲಿದೆ. ಆನ್‌ಲೈನ್ ಮತ್ತು ಸ್ಟೋರ್ ಮೂಲಕ ನೂತನ ವಿವೊ Y12G ಸ್ಮಾರ್ಟ್‌ಫೋನ್ ದೊರೆಯಲಿದೆ. ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 439 ಪ್ರೊಸೆಸರ್, ಹಿಂಭಾಗದಲ್ಲಿ 13+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಹಾಗೂ 8 ಮೆಗಾಪಿಕ್ಸೆಲ್ ಸೆಲ್ಫಿ, 5000ಎಂಎಎಚ್ ಬ್ಯಾಟರಿ ಇದರ ವಿಶೇಷತೆಯಾಗಿದೆ.