ರಕ್ಷಾಬಂಧನ ದಿನದಂದೇ ಸಹೋದರನ ಸಾವು.. ಕೊನೆಯಬಾರಿ ರಾಖಿ ಕಟ್ಟಿದ ಸಹೋದರಿಯರು..
Monday, August 23, 2021
ತೆಲಂಗಾಣ: ಈ ಒಂದು ಕುಟುಂಬದ ಮಹಿಳೆಯರು ಮೃತ ಸಹೋದರನ ಕೈಗೆ ರಾಖಿ ಕಟ್ಟಿದ್ದಾರೆ.ಜಿಲ್ಲೆಯ ಮದ್ಗುಲಪಲ್ಲಿ ಮಂಡಲದ ಮಲಗುಡೆಂ ಗ್ರಾಮದಲ್ಲಿ ಇಂತಹದೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದೆ.
ಚಿಂತಪಲ್ಲಿ ಲಕ್ಷ್ಮಯ್ಯ (50) ಎಂಬವರಿಗೆ ಐದು ಮಂದಿ ಸಹೋದರಿಯರಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ರಕ್ಷಾಬಂಧನದ ಪ್ರಯುಕ್ತ ರಾಖಿ ಕಟ್ಟಲೆಂದು ಈ ಸಹೋದರಿಯರು ಶನಿವಾರ ರಾತ್ರಿಯೇ ತವರು ಮನೆಗೆ ಬಂದಿದ್ದಾರೆ.ಆದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಯ್ಯ ಅವರು ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆ ಐವರು ಸಹೋದರಿಯರು ಅಂತ್ಯಕ್ರಿಯೆಗೂ ಮುನ್ನ ಕೊನೆಯ ಬಾರಿ ಅಣ್ಣನ ಕೈಗೆ ಕಣ್ಣೀರುಡುತ್ತಲೇ ರಾಖಿ ಕಟ್ಟಿದ್ದಾರೆ.
ಎಲ್ಲರ ಮನಕಲಕುವಂತಿದೆ ಈ ದ್ರಶ್ಯ.