ಮೈಸೂರು ವಿವಿ ಪ್ರಾಧ್ಯಾಪಕನ ಕಾಮಪುರಾಣ ಬಿಚ್ಚಿಟ್ಟ ಪತ್ನಿ...
Friday, August 6, 2021
ಮೈಸೂರು: ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪತ್ನಿಯ ಕೈಗೇಸಿಕ್ಕಿಹಾಕಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಬಗ್ಗೆ ಮತ್ತಷ್ಟು ಕಾಮಪುರಾಣವನ್ನು ಅವರ ಪತ್ನಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.
ಮೈಸೂರು ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪಿಎಚ್‌ಡಿ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿಯೂ ಮನೆಗೆ ಬಂದಾಗ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ.
ವಿದ್ಯಾರ್ಥಿನಿ ಹಾಗೂ ಪತಿ ಇಬ್ಬರನ್ನೂ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಗೆ ಕರೆದುಕೊಂಡು ಬಂದಿರುವ ಪತ್ನಿ ಲೋಲಾಕ್ಷಿ, ಪೊಲೀಸರ ಮುಂದೆ ತನ್ನ ಪತಿಯ ಕಾಮಪುರಾಣವನ್ನು ವಿವರಿಸಿದ್ದಾರೆ. ನನ್ನ ಪತಿ ಪ್ರೊ.ರಾಮಚಂದ್ರ ಡಿಪಾರ್ಟ್ಮೆಂಟ್ನಲ್ಲೇ ವಿದ್ಯಾರ್ಥಿನಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ. ಅವರಿಂದ ಪಿಎಚ್‌ಡಿ ಮಾರ್ಗದರ್ಶನ ಪಡೆಯುವ ಕೆಲವು ಪುರುಷ ವಿದ್ಯಾರ್ಥಿಗಳು ಪತಿಯ ಬಳಿಗೆ ಯುವತಿಯರನ್ನು ಕಳುಹಿಸುತ್ತಿದ್ದರು. ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾರೆ. ಇವೆಲ್ಲದರ ಬಗ್ಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು. ಅದು ಇಂದು ಸಾಬೀತಾಗಿದೆ ಎಂದು ಲೋಲಾಕ್ಷಿ ವಿವರಿಸಿದ್ದಾರೆ.
ಬೇರೆ ಯಾವ ಯುವತಿಯರ ಮೇಲೂ ಇಂತಹ ದಾಳಿ ನಡೆಯಬಾರದು. ಹೀಗಾಗಿ ನಾನೇ ಮುಂದೆ ನಿಂತು ದೂರು ದಾಖಲಿಸಿದ್ದೇನೆ. ವಿವಿಯ ಕುಲಪತಿ-ಕುಲಸಚಿವರ ಗಮನಕ್ಕೂ ತಂದಿದ್ದೇನೆ ಎಂದು ಆರೋಪಿಯ ಪತ್ನಿ, ಮೈಸೂರು ವಿವಿಯ ಪ್ರಾಧ್ಯಾಪಕಿಯೂ ಆಗಿರುವ ಡಾ.ಲೋಲಾಕ್ಷಿ ಪೊಲೀಸರಿಗೆ ತಿಳಿಸಿದ್ದಾರೆ.