ಬಿಗ್ ಬಾಸ್ ನಲ್ಲಿ ಇವೆಲ್ಲ ನಡೆಯುತ್ತಂತೆ..!! ರಹಸ್ಯಗಳನ್ನು ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ..
Monday, August 23, 2021
ಮುಂಬೈ: ಹಿಂದಿ ಬಿಗ್ ಬಾಸ್ ನಲ್ಲಿ ನಡೆಯುವ ಕೆಲವೊಂದು ಸುದ್ದಿಗಳನ್ನು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸ್ಪರ್ಧಿ ಉರ್ಫಿ ಜಾವೇದ್ ಹೊರಹಾಕಿದ್ದಾರೆ.
'ಬಿಗ್‌ಬಾಸ್ ಮನೆಯಲ್ಲಿ ಕ್ಯಾಮರಾ ಮುಂದೆಯೇ ಸೆಕ್ಸ್ ನಡೆಯುತ್ತಿದೆ' ಎಂದು ಮನೆಯಿಂದ ಹೊರ ಬಂದಿರುವ ಉರ್ಫಿ ಜಾವೇದ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
'ಬಿಗ್ ಬಾಸ್ ಒಟಿಟಿ ಕೆ ಘರ್ ಮೇ ಸೆಕ್ಸ್ ಹೋ ಚುಕಾ ಹೈ ಕ್ಯಾಮೆರಾ' ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಇತರೆ ಸ್ಪರ್ಧಿಗಳು ನೀನು ಏನು ಹೇಳುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಮತ್ತೋರ್ವ ಸ್ಪರ್ಧಿ ಪ್ರತೀಕ್ ಸೆಹಜ್ಪಾಲ್, ಏನು ಮಾತನಾಡುತ್ತಿದ್ದೀರಿ? ಎಂದು ಉರ್ಫಿಯನ್ನು ಕೇಳಿದಾಗ, 'ಪ್ರತೀಕ್ ಸೋ ರಹೇ ಕ್ಯಾ? ಜಬ್ ಸೆಕ್ಸ್ ಹೋ ರಹಾ ಥಾ ಕ್ಯಾಮರಾ' ಎಂದು ಪ್ರಶ್ನಿಸಿದ್ದಾರೆ.ಉರ್ಫಿ ತನ್ನ ತಮಾಷೆಯ ನಟನೆ ಮತ್ತು ಜನರನ್ನು ಅನುಕರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಿದ್ದಾರೆ.