ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಆನ್ಲೈನ್ ತರಗತಿಯ ವೇಳಾಪಟ್ಟಿ ಪ್ರಕಟ..
Wednesday, July 14, 2021
ಬೆಂಗಳೂರು: ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷವು ಜು.15ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಪಾಠಗಳನ್ನು ಆರಂಭಿಸಲಾಗುತ್ತಿದೆ.
ಪ್ರತಿ ಕಾಲೇಜಿನ ಉಪನ್ಯಾಸಕರೇ, ಅವರ ವಿದ್ಯಾರ್ಥಿಗಳಿಗೆ MS Team, Google Meet, Zoom ಅಥವಾ Jio ಮೀಟ್ ಆ್ಯಪ್‌ಗಳನ್ನು ಉಪಯೋಗಿಸಿಕೊಂಡು ಪಾಠಗಳನ್ನು ಆರಂಭಿಸಲು ತಿಳಿಸಿದೆ. ಈ ಸಂಬಂಧ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಲ್ಲಿರುವಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ರಚಿಸಿ ಆದೇಶಿಸಿದೆ.
ವೇಳಾಪಟ್ಟಿ ಹೀಗಿದೆ:
ಬೆಳಗ್ಗೆ 10.00 ರಿಂದ 11.00 - ಮೊದಲ ಅವಧಿ
ಬೆಳಗ್ಗೆ 11.00 ರಿಂದ 12.00 ಎರಡನೇ ಅವಧಿ
12.00 ರಿಂದ 12:30 – ವಿರಾಮ
12.30 ರಿಂದ 01:30 – ಮೂರನೇ ಅವಧಿ
01.30 ರಿಂದ 02.30 - ನಾಲ್ಕನೇ ಅವಧಿ
ವೇಳಾಪಟ್ಟಿಗನುಗುಣವಾಗಿ ತರಗತಿಗಳನ್ನು ಸೂಕ್ತ ಲಿಂಕ್‌ಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿ ತರಗತಿ ನಡೆಸಲು ತಿಳಿಸಿದೆ. ಈ ಸಂಬಂಧ ಎಲ್ಲಾ ಉಪನ್ಯಾಸಕರು ಕಡ್ಡಾಯವಾಗಿ ಪಾಠಗಳನ್ನು ನಡೆಸಿ, ಹಾಜರಾತಿಯನ್ನು ತೆಗೆದುಕೊಂಡು, ಪ್ರಾಂಶುಪಾಲರಿಗೆ ಪ್ರತಿದಿನದ ಹಾಜರಾತಿ ಮಾಹಿತಿಯನ್ನು ಕಳುಹಿಸಬೇಕು.ಯಾವುದೇ ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲದಿದ್ದ ಪಕ್ಷದಲ್ಲಿ 20 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ಈ ವಿದ್ಯಾರ್ಥಿಗಳನ್ನು ಹತ್ತಿರದ ಕಾಲೇಜಿನ, ವಿಷಯದ ಉಪನ್ಯಾಸಕರಿಗೆ ಸರಿಹೊಂದಿಸಬೇಕು. ತರಗತಿಗಳನ್ನು ನಡೆಸುವ ಜವಾಬ್ದಾರಿಯನ್ನು ನೀಡಬೇಕು. ಆಯಾ ಜಿಲ್ಲೆಯ ಉಪನಿರ್ದೇಶಕರು ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗುವ ಬಗ್ಗೆ ವಿವರವನ್ನು ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ.