-->
ads hereindex.jpg
ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆಗೈದ ಚಾಲಾಕಿ ಪತ್ನಿ..!! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆಗೈದ ಚಾಲಾಕಿ ಪತ್ನಿ..!! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಮಂಡ್ಯ: ಪ್ರಿಯತಮನೊಂದಿಗೆ ಸೇರಿಕೊಂಡು ಗಂಡನನ್ನೆ ಉಸಿರುಕಟ್ಟಿಸಿ ಸಾಯಿಸಿ ನಂತರ ಗಂಡ ಹೃದಯಾಘಾತದಿಂದ ಸತ್ತು ಹೋಗಿದ್ದಾರೆ ಎಂದು  ಕಥೆ ಕಟ್ಟಿದ್ದ ಹೆಂಡತಿ ಹಾಗೂ ಆಕೆಯ ಪ್ರಿಯಕರನನ್ನು ಮಂಡ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಳೆದ ಜು.29ರಂದು ಮಂಡ್ಯದಲ್ಲಿ ಅಲ್ತಾಫ್ ಮೆಹದಿ (56) ಎಂಬುವವರು ಮೃತಪಟ್ಟಿದ್ದರು. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪತ್ನಿ ಸೈಯಿದಾ ರಿಜ್ವಾನಾ ಬಾನು (36) ಹಾಗೂ ಆಕೆಯ ಪ್ರಿಯಕರ ದಾವಣಗೆರೆ ಜಿಲ್ಲೆಯ ಹರಿಹರ ನಿವಾಸಿ ರೆಹಮತ್ತುಲ್ಲಾ (36) ಕಥೆ ಕಟ್ಟಿದ್ದರು. 

ಆದರೆ ಮೃತನ‌ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶವವನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸಿದ್ದು, ಪರೀಕ್ಷಾ ವರದಿಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಸೈಯಿದಾ ಬಾನುಳನ್ನು ಮತ್ತು ರೆಹಮತ್ತುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ.ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Ads on article

Advertise in articles 1

advertising articles 2