
Mangalore Accident: ಕದ್ರಿಯಲ್ಲಿ ಭೀಕರ ಅಪಘಾತಕ್ಕೆ ಯುವತಿ ಸಾವು
ಮಂಗಳೂರು: ಮಂಗಳೂರಿನ ಕದ್ರಿ ಹರಿಪದವು ಎಂಬಲ್ಲಿ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ನಡೆದು ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಿಯಾಂಕ ( 31 ) ಎಂಬವರು ಸಾವನ್ನಪ್ಪಿದ್ದಾರೆ.
ಮಂಗಳೂರಿನ ಬೀರಿ ಕೋಟೆಕಾರಿನ ಶಕ್ತಿ ಸ್ಟೋರ್ ಮಾಲಕರ ಪುತ್ರಿಯಾಗಿರುವ ಪ್ರಿಯಾಂಕ ತಮ್ಮ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹರಿಪದವು ಬಳಿ ವಿರುದ್ಧ ಧಿಕ್ಕಿನಲ್ಲಿ ಬಂದ ಆಲ್ಟೋ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಪ್ರಿಯಾಂಕ ಅವರು ಇಂದು ಮೃತಪಟ್ಟಿದ್ದಾರೆ.
ವಾಮಂಜೂರಿನ ನಿವಾಸಿ ವಿನೋದ್ ರಾಜ್ ಎಂಬವರ ಪತ್ನಿಯಾಗಿರುವ ಪ್ರಿಯಾಂಕ, ಉಳ್ಳಾಲದ ಪಾಂಡ್ಯರಾಜ್ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.