ಪ್ರೀತಿ ಪ್ರೂ ಮಾಡಲೆಂದು ವಿಷ ಕುಡಿದ ಲವ್ ಬರ್ಡ್ಸ್ !ಮುಂದೇನಾಯಿತು ನೋಡಿ..
Saturday, July 10, 2021
ಮನ್ಪ್ರೀತ್ ಕೌರ್ ಹಾಗೂ ಹರ್ಜಿಂದ್ರ ಸಿಂಗ್
ಕಳೆದ ಐದು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ಇದೀಗ ಪರಸ್ಪರ ತಮ್ಮ ಮೇಲಿನ ಪ್ರೀತಿ ಸಾಬೀತು ಪಡಿಸುವ ಉದ್ದೇಶದಿಂದ ತಂಪು ಪಾನೀಯದಲ್ಲಿ ಇಲಿ ಔಷಧಿ ಸೇರಿಸಿ ಕುಡಿದಿದ್ದಾರೆ. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ನೀಡ್ತಿದ್ದ ವೇಳೆ ಪತ್ನಿ ಮನ್ಪ್ರೀತ್ ಕೌರ್ ಸಾವನ್ನಪ್ಪಿದ್ದಾರೆ.
ಹರ್ಜಿಂದ್ರ ಸಿಂಗ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.