
ಬಾಯ್ ಫ್ರೆಂಡ್ ನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಸಿಟ್ಟಿಗೆ ಕಂಪನಿಗೆ ಬೆಂಕಿ ಹಚ್ಚಿದ ಯುವತಿ!
ರಾಜ್‌ಕೋಟ್ತ: ಬಾಯ್ ಫ್ರೆಂಡ್ ನನ್ನು ಕೆಲಸದಿಂದ ತೆಗೆದು ಹಾಕಿದ ಸಿಟ್ಟಿಗೆ ಯುವತಿಯೊಬ್ಬಳು ಫ್ಯಾಕ್ಟರಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾಳೆ. ಈ ಘಟನೆ ಗುಜರಾತ್‌ನ ಗಾಂಧಿಧಾಮದಿಂದ ವರದಿಯಾಗಿದೆ.
ಆರೋಪಿಯನ್ನು 24 ವರ್ಷದ ಯುವತಿ ಮಾಯಾಬೆನ್ ಪರ್ಮಾರ್ ಎಂದು ಗುರುತಿಸಲಾಗಿದೆ. ಬಳಸಿದ ಬಟ್ಟೆಗಳನ್ನು ಮರುಬಳಕೆ ಮಾಡುವ ಕಂಪನಿ ಕೆನಮ್ ಇಂಟರ್ನ್ಯಾಷನಲ್ (ಪಿ) ಲಿಮಿಟೆಡ್‌ನ ಕಾರ್ಖಾನೆಗೆ ಬೆಂಕಿ ಇಡುವ ಯತ್ನ ಮಾಡಿದ್ದಾಳೆ. ತನ್ನ ಗೆಳೆಯನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದೆ ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ.
ಆಕೆ ಬೆಂಕಿ ಹಚ್ಚಿದನ್ನು ಕಂಪನಿಯ ನೌಕರನೊಬ್ಬ ಗಮನಿಸಿದ್ದಾನೆ. ತಕ್ಷಣ ಅದನ್ನು ಆರಿಸುವ ಕೆಲಸ ಮಾಡಿದ್ದಾರೆ. ಆಕೆ ಪೊಲೀಸರು ಯುವತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.