ಮದುವೆಯಾಗುತ್ತೇನೆಂದು ನಂಬಿಸಿ ಕೈಗೆ ಮಗು ಕೊಟ್ಟು ಪರಾರಿಯಾದ ಕಿರುತೆರೆ ನಟ..
Friday, July 30, 2021
ಬೆಂಗಳೂರು: ಕನ್ನಡದ ಕಿರುತೆರೆ ನಟ ಚಿಕ್ಕಮಗಳೂರು ಜಿಲ್ಲೆ ತಾಲೂಕಿನ ಕಳಸಾಪುರ ನಿವಾಸಿ ಉಮೇಶ್, ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ಯುವತಿ ಉಮೇಶ್ ನ ಬಣ್ಣದ ಮಾತುಗಳಿಗೆ ಮರುಳಾಗಿ ಮೋಸಕ್ಕೊಳಗಾಗಿದ್ದಾಳೆ. ಉಮೇಶನ ಮನೆ ಎದುರು ಯುವತಿ ಪ್ರತಿಭಟನೆ ನಡೆಸಿದ್ದಾಳೆ. ಮೋಸಕ್ಕೊಳಗಾಗಿರುವ ಯುವತಿ ಆತನ ಮನೆ ಎದುರು ತನ್ನ 5 ತಿಂಗಳ ಮಗುವಿನ ಜೊತೆ ಧರಣಿ ಕುಳಿತಿದ್ದಾಳೆ. ಆತನೊಂದಿಗೆ ಮದುವೆ ಮಾಡಿಸಿ ಎಂದು ಒತ್ತಾಯಿಸಿದ್ದಾಳೆ.
“ಮಗು ಹುಟ್ಟುವ ಮುಂಚೆ ತೆಗೆಸು ಎಂದು ಕೇಳಿಕೊಂಡರು ಏನೂ ಮಾಡಲಿಲ್ಲ. ಇಂದು ಮಗು ಇಟ್ಟುಕೊಂಡು ನಾನು ಎಲ್ಲಿಗೆ ಹೋಗಲಿ. ಮಗು ಆದಮೇಲೆ ಸಹ ನನ್ನ ಮಗುವನ್ನು ಮಹಿಳೆಯೊಬ್ಬಳ ಜೊತೆ ಸೇರಿ ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸಿದ್ದ” ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾಳೆ. ಸಂತ್ರಸ್ತ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ ಉಮೇಶನ ಮೊದಲ ಹೆಂಡತಿ. ”ಅವನಿಗೂ ನಮಗೂ ಸಂಬಂಧವೇ ಇಲ್ಲ. ಅವನು ನಿನಗೆ ಮೋಸ ಮಾಡಿದ್ದರೆ ಹೋಗಿ ಅವನನ್ನೇ ಕೇಳು” ಎಂದು ದಬಾಯಿಸಿದ್ದಾರೆ. ಯುವತಿಗೆ ಪೊಲೀಸರು ಸಮಾಧಾನಪಡಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.