-->

ವೈರಲ್ ಆಯಿತು ಮಲಯಾಳಂ ನಟಿ ರೆಮ್ಯಾ ಸುರೇಶ್ FAKE ಅಶ್ಲೀಲ ವೀಡಿಯೋ

ವೈರಲ್ ಆಯಿತು ಮಲಯಾಳಂ ನಟಿ ರೆಮ್ಯಾ ಸುರೇಶ್ FAKE ಅಶ್ಲೀಲ ವೀಡಿಯೋ


ತಿರುವನಂತಪುರಂ: ಅಶ್ಲೀಲ ವೀಡಿಯೋವೊಂದರಲ್ಲಿ ತಮ್ಮ ಮುಖವನ್ನು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದರ ವಿರುದ್ಧ ಮಲಯಾಳಂ ನಟಿ ರೆಮ್ಯಾ ಸುರೇಶ್​ ಸೈಬರ್​ ಕ್ರೈಂಗೆ ದೂರು ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಶ್ಲೀಲ​ ವಿಡಿಯೋದಲ್ಲಿರುವ ಮಹಿಳೆಯ ಮುಖವನ್ನು ರೆಮ್ಯಾ ಸುರೇಶ್​ ರವರ ರೀತಿ ಕಾಣುವಂತೆ ಎಡಿಟ್​ ಮಾಡಲಾಗಿದೆ. ಈ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿರುವುದನ್ನು​ ಗಮನಿಸಿದ ನಟಿ ರೆಮ್ಯಾ ಸುರೇಶ್ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಘಟನೆ ಸಂಬಂಧಿಸಿದಂತೆ ಆಲಪ್ಪುಳ ಪೊಲೀಸ್​ ವರಿಷ್ಠಾಧಿಕಾರಿಗೆ ಮತ್ತು ಸೈಬರ್​ ಕ್ರೈಂಗೆ ರೆಮ್ಯಾ ದೂರು ನೀಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಮ್ಯಾ, 'ಅಧಿಕಾರಿಗಳು ದೂರನ್ನು ಸ್ವೀಕರಿಸಿದ್ದು, ತನಿಖೆ ಆರಂಭಿಸಿದ್ದಾರೆ. ವಾಟ್ಸ್​ಆ್ಯಪ್​ ಗ್ರೂಪ್​ ಡೇಟಾವನ್ನು ಕಲೆಹಾಕಿದ್ದಾರೆ. ಗ್ರೂಪ್​ನ ಅಡ್ಮಿನ್​ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆಂದು ತಿಳಿಸಿದ್ದಾರೆ. ಎಷ್ಟು ಮಂದಿ ಈ ವಿಡಿಯೋ ನೋಡಿದ್ದಾರೆಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಹೇಗೆ ತಲುಪಬಹುದು ಮತ್ತು ಆ ವೀಡಿಯೊ ಕ್ಲಿಪ್‌ನಲ್ಲಿ ಅವರು ನನ್ನನ್ನು ನೋಡುತ್ತಿಲ್ಲ ಎಂದು ಹೇಗೆ ಹೇಳಬಹುದು? ಈ ವಿಡಿಯೋದಿಂದ ನಾನು ಮಾನಸಿಕ ನೊಂದಿದ್ದೇನೆ' ಎಂದು ನೋವು ತೋಡಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99