ನೀವು ಎಂದಾದರೂ ಮಕ್ಕಾದಲ್ಲಿರುವ ಸ್ವರ್ಗದ ಕಲ್ಲು ಹಜರುಲ್ ಅಸ್ವದನ್ನು ನೋಡಿದ್ದೀರಾ? - ಇಲ್ಲದಿದ್ದರೆ ಇಲ್ಲಿ ನೋಡಿ
Friday, May 7, 2021
ರಿಯಾದ್: ಮಕ್ಕಾ ಮುಸ್ಲಿಮರ ಪವಿತ್ರ ತೀರ್ಥಯಾತ್ರಾ ಕೇಂದ್ರ. ಇಲ್ಲಿ ಮುಸ್ಲಿಮರು ಪ್ರದಕ್ಷಿಣೆ ಬರುವ ಕಅಬಾದ ಪೂರ್ವ ದಿಕ್ಕಿನಲ್ಲಿ ಹಜರುಲ್ ಅಸ್ವದ್ ಎಂಬ ಕಲ್ಲು ಇದೆ. ಇದು ಸ್ವರ್ಗದ ಕಲ್ಲು ಎಂಬ ನಂಬಿಕೆ ಇರುವ ಈ ಕಲ್ಲನ್ನು ಮಕ್ಕಾ ಯಾತ್ತೆಯ ಸಂದರ್ಭದಲ್ಲಿ ಮುಸ್ಲಿಮರು ಮುಗಿಬಿದ್ದು ಮುತ್ತಿಕ್ಕುತ್ತಾರೆ. ಈ ಕಲ್ಲನ್ನು ಗುಹೆ ಆಕಾರದ ಒಳಗೆ ಇಡಲಾಗಿದ್ದು, ಇದನ್ನು ಪೂರ್ಣವಾಗಿ ನೋಡಲು ವಿಶ್ವಾಸಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಅಲ್ಲಿನ ಜನಜಂಗುಳಿ ಮತ್ತು ಇಕ್ಕಟ್ಟಾದ ಗುಹೆ ಆಕಾರದ ಒಳಗಡೆ ಇರುವುದೇ ಇದಕ್ಕೆ ಕಾರಣ.
#رئاسة_شؤون_الحرمين توثق الحجر الأسود بتقنية (Focus Stack Panorama)
— رئاسة شؤون الحرمين (@ReasahAlharmain) May 3, 2021
ماهي هذه التقنية ؟
هي تقنية يتم فيها تجميع الصور بوضوح مختلف، حتى تنتج لنا صورة واحدة بأكبر دقة. pic.twitter.com/n0mWCPAw1r
ಇದೀಗ ರಿಯಾಸತುಲ್ ಹರಮೈನ್ ಟ್ವಿಟರ್ ಖಾತೆಯು ಹಜರುಲ್ ಅಸ್ವದ್ ಕಲ್ಲಿನ ಅತ್ಯುನ್ನತ ಕ್ವಾಲಿಟಿಯ ಫೋಟೋ ಬಿಡುಗಡೆ ಮಾಡಿದ್ದು, ಇದು ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.
ಅತ್ಯುನ್ನತ ಕ್ಯಾಮರಾ ತಂತ್ರಜ್ಞಾನಗಳನ್ನು ಬಳಸಿ ಈ ಕಲ್ಲಿನ ವಿವಿಧ ಫೋಟೋ ಗಳನ್ನು ಸೆರೆ ಹಿಡಿಯಲಾಗಿದೆ.
ಈ ಫೋಟೋಗಳನ್ನು 49 ಸಾವಿರ ಮೆಘಾಪಿಕ್ಸೆಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ಇದಕ್ಕೆ ಸುಮಾರು ಒಂದು ಗಂಟೆ ತಗುಲಿದೆ ಎಂದು ಹರಮೈನ್ ತಿಳಿಸಿದೆ.