
ಈ ಬಾರಿ ಶಾಸಕ ಯುಟಿ ಖಾದರ್ ಈದ್ ಉಲ್ ಫಿತರ್ ಆಚರಿಸಿದ್ದು ಹೇಗೆ ಗೊತ್ತಾ
ಮಂಗಳೂರು: ಇಂದು ಕರಾವಳಿಯಾದ್ಯಂತ ಈದುಲ್ ಫಿತರ್ ಹಬ್ಬದ ಸಂಭ್ರಮ. ಆದರೆ ಕೊರೋನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್. ಈ ನಡುವೆ ಕರಾವಳಿಯಾದ್ಯಂತ ಮುಸ್ಲಿಮರು ಸರಳವಾಗಿ ಮನೆಯಲ್ಲೇ ಹಬ್ಬ ಆಚರಿಸಿದ್ದಾರೆ.
ಶಾಸಕ ಯು.ಟಿ ಖಾದರ್ ತಮ್ಮ ಮನೆಯಲ್ಲೇ ಕುಟುಂಬದ ಸದಸ್ಯರು, ಬಂಧು ಮಿತ್ರರು ಮತ್ತು ಹಿತೈಷಿಗಳ ಜೊತೆ ಸರಳವಾಗಿ ಹಬ್ಬ ಆಚರಿಸಿದರು.
ಧರ್ಮಗುರುಗಳ ನೇತೃತ್ವದಲ್ಲಿ ಮನೆಯಲ್ಲೇ ಈದುಲ್ ಫಿತರ್ ನಮಾಝ್ ಮತ್ತು ಪ್ರವಚನ ನಡೆಯಿತು.
ಬಳಿಕ ಕುಟುಂಬಸ್ಥರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.