ಕಂಗನಾ ಟ್ವಿಟರ್‌ನಿಂದ ಔಟ್.... ಯಾಕೆ ಗೊತ್ತಾ
Tuesday, May 4, 2021
ಮುಂಬೈ: ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ದಿನವಾದ ಮೇ. 2ರಂದು ಪಶ್ಚಿಮ ಬಂಗಾಳ ಕುರಿತು ಸರಣಿ ಟ್ವೀಟ್ ಮಾಡಿರುವ ಕಂಗನಾ ಮಮತಾ ಬ್ಯಾನರ್ಜಿ ಕುರಿತಂತೆ ಆಕ್ಷೇಪಾರ್ಹ ಅಂಶಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವಿನ ಬಳಿಕ ಕೊಲೆಗಳು ನಡೆಯುತ್ತಿದ್ದು, ಬಂಗಾಳ ಉರಿಯುತ್ತಿದೆ ಎಂಬರ್ಥದ ಪೋಸ್ಟ್ ಗಳನ್ನು ತಮ್ಮ ಖಾತೆಯಲ್ಲಿ ಕಂಗನಾ ಹಂಚಿಕೊಂಡಿದ್ದರು. ಅಲ್ಲದೇ ಇಂದಿರಾ ಗಾಂಧಿ ವಿರುದ್ಧ ಕೂಡಾ ಇದೇ ಸಂದರ್ಭದಲ್ಲಿ ಅವರು ಟ್ವೀಟ್ ಮಾಡಿದ್ದರು