
ನಂದಿಗ್ರಾಮದಿಂದ ಸೋತರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯೇ.... ಹೇಗೆ ಗೊತ್ತಾ???
Monday, May 3, 2021
ಕೋಲ್ಕತ್ತಾ: ತೀವ್ರ ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅತ್ಯಂತ ಹೆಚ್ಚು ಸೀಟುಗಳನ್ನು ಗಳಿಸಿದ್ದರೂ ಟಿಎಂಸಿ ಯ ಮುಖ್ಯಮಂತ್ರಿ ಅಭ್ಯರ್ಥಿ ನಂದಿಗ್ರಾಮದಿಂದ ಬಿಜೆಪಿ ವಿರುದ್ಧ ಸೋತಿದ್ದರು.
ಆದರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗುದಕ್ಕೆ ಯಾವುದೇ ವಿಘ್ನವಿಲ್ಲ.
ಶಾಸಕಾಂಗಕ್ಕೆ ಜನರಿಂದ ಚುನಾಯಿತರಾಗದಿದ್ದರೂ, ಸಂವಿಧಾನದ 165ನೇ ವಿಧಿ ಪ್ರಕಾರ ಗರಿಷ್ಠ 6 ತಿಂಗಳುಗಳ ಕಾಲ ಮಂತ್ರಿಯಾಗಬಹುದು. ಆದರೆ ಈ 6 ತಿಂಗಳ ಒಳಗಾಗಿ ವಿಧಾನ ಸಭೆಗೋ, ವಿಧಾನ ಪರಿಷತ್‌ಗೋ ಆಯ್ಕೆಯಾಗಬೇಕು. ಆದರೆ ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಸದಸ್ಯತ್ವ ಇಲ್ಲದೇ ಇರುವುದರಿಂದ ಮಮತಾ ಬ್ಯಾನರ್ಜಿ ಯಾವುದಾರೊಂದು ವಿಧಾನಸಭಾ ಕ್ಷೇತ್ರದ ಮೂಲಕ ಮತ್ತೆ ಚುನಾವಣೆ ಎದುರಿಸುವ ಸಾಧ್ಯತೆ ಇದೆ.
ಪಶ್ಚಿಮ ಬಂಗಾಳದಲ್ಲಿ 1952ರಲ್ಲಿ ವಿಧಾನ ಪರಿಷತ್ ಸದಸ್ಯ ತ್ವಕ್ಕೆ ಅವಕಾಶ ವಿತ್ತು. ಆದರೆ 1969ರಲ್ಲಿ ವಿಧಾನ ಸಭೆಯಲ್ಲಿ ನಿರ್ಣಯ ಪಾಸ್ ಮಾಡುವ ಮೂಲಕ ಇದನ್ನು ತೆಗೆದುಹಾಕಿತ್ತು.
ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದಾಗ ಅವರು ಸಂಸತ್ ಸದಸ್ಯರಾಗಿದ್ದರಷ್ಟೇ. ಯಾವುದೇ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲ. ಮುಖ್ಯಮಂತ್ರಿಯಾದ ಬಳಿಕ ಭವಾನೀಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಸಂವಿಧಾನದ 75(5) ವಿಧಿಯ ಪ್ರಕಾರ ಕೇಂದ್ರ ಸಚಿವರೂ ಈ ರೀತಿಯಾಗಿ ಆಯ್ಕೆಯಾಗಬಹುದು.