ಇಯರ್ ಪೋನ್‌ನಿಂದ ಬಿಗಿದು ನವಜಾತ ಶಿಶುವನ್ನು ಕೊಂದ ಶಾಹಿನಾ
Thursday, January 7, 2021
ಕಾಸರಗೋಡು: ಕಾಸಾರಗೋಡ್‌ನ ಬದಿಯಡ್ಕದಲ್ಲಿ ನವಜಾತ ಶಿಶುವನ್ನು ಇಯರ್ ಪೋನ್ ನಿಂದ ಬಿಗಿದು ಹತ್ಯೆ ಮಾಡಿದ ಪಾಪಿ ತಾಯಿಯನ್ನು ಬಂಧಿಸಲಾಗಿದೆ.
ತನ್ನದೆ ಮಗುವನ್ನು ಜನಿಸಿದ ಕೂಡಲೇ ಬದಿಯಡ್ಕದ
ಚೆಟ್ಕಲ್‌ನ ಶಫಿಯ ಎಂಬವರ ಪತ್ನಿ ಶಾಹಿನಾ ಕೊಂದಿದ್ದಾಳೆ. ಈ ಘಟನೆ ಡಿಸೆಂಬರ್ 15 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಗುವಿನ ಜನನದ ಸ್ವಲ್ಪ ಸಮಯದ ನಂತರ ಮಗುವನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಶಾಹಿನಾ ಗರ್ಭವತಿಯಾಗಿರುವ ಬಗ್ಗೆ ಪತಿ ಶಫಿ ಅಥವಾ ಅವರ ಕುಟುಂಬಕ್ಕೆ ತಿಳಿದಿರಲಿಲ್ಲ. ಶಾಹಿನಾಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಕುಟುಂಬಿಕರಿಗ ತಿಳಿದುಬಂದಿದೆ.
ಇಯರ್‌ಫೋನ್ ವಯರನ್ನು ಕುತ್ತಿಗೆಗೆ ಸುತ್ತಿ ಈಕೆ ಮಗುವನ್ನು ಕೊಂದಿರುವುದಾಗಿ ತಿಳಿಸಿದ್ದಾಳೆ.ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಶವಪರೀಕ್ಷೆಯಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ವರದಿ ಬಂದಿದೆ.
ಮೊದಲ ಮಗು ಜನಿಸಿದ ಮೂರೆ ತಿಂಗಳಲ್ಲಿ ಗರ್ಭಿಯಾಗಿರುವುದರಿಂದ ಈ ಕೃತ್ಯ ಮಾಡಿದೆ ಎಂದು ಆಕೆ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾಳೆ.