ಮಂಗಳೂರಿನಲ್ಲಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಿಡಿಗೇಡಿ ಕೃತ್ಯ- ಧಾರ್ಮಿಕ ನಿಂದನೆ, ಕಾಂಡೋಮ್ ಹಾಕಿ ದುಷ್ಕ್ರತ್ಯ!
Saturday, January 2, 2021
ಮಂಗಳೂರು: ಕರಾವಳಿ ಜಿಲ್ಲೆಯ ಜನರು ಆರಾಧಿಸುವ ದೈವಸ್ಥಾನಗಳ ಬಗ್ಗೆ ನಂಬುಗೆಯುಳ್ಳವರ ಮನಸಿಗೆ ಘಾಸಿ ಮಾಡುವ ದುಷ್ಕ್ರೃತ್ಯವನ್ನು ಕಿಡಿಗೇಡಿಗಳು ಮಾಡಿದ್ದಾರೆ.
ಮಂಗಳೂರಿನ ಅತ್ತಾವರದ ಬಾಬುಗುಡ್ಡೆ ಬಬ್ಬುಸ್ವಾಮಿ ದೇವಸ್ಥಾನ ಮತ್ತು ಕೊಟ್ಟಾರದ ಕಲ್ಲುರ್ಟಿ ದೇವಸ್ಥಾನ ದ ಕಾಣಿಕೆ ಡಬ್ಬಿಯಲ್ಲಿ ದುಷ್ಕರ್ಮಿಗಳು ಧಾರ್ಮಿಕ ನಿಂದನೆ ಮಾಡುವ ಕೆಲಸ ಮಾಡಿದ್ದಾರೆ.
ಎರಡು ದೈವಸ್ಥಾನಗಳ ಕಾಣಿಕೆ ಡಬ್ಬಿಯಲ್ಲಿ ಖೋಟಾನೋಟು ಹಾಕಿ ಅದರಲ್ಲಿ ಧಾರ್ಮಿಕ ನಿಂದನೆ ಮಾಡುವ ಬರಹ ಬರೆದು ಹಾಕಲಾಗಿದೆ. ಜೊತೆಗೆ ಬಳಸಿದ ಕಾಂಡೋಮ್ ಕೂಡ ಅದಕ್ಕೆ ಹಾಕಲಾಗಿದೆ. ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ವಿರೂಪಗೊಳಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ದೈವಸ್ಥಾನಗಳ ಆಡಳಿತ ಮಂಡಳಿಯವರು ಪೊಲೀಸ್ ದೂರು ನೀಡಲು ನಿರ್ಧರಿಸಿದ್ದಾರೆ.