35 ಲಕ್ಷದ ಚಿನ್ನದ ಉಡುಗೊರೆ ಫೇಸ್‌ಬುಕ್ ಗೆಳೆಯ ಕಳುಹಿಸುತ್ತಾನಂತೆ... ಮಂಗಳೂರಿನ ವ್ಯಕ್ತಿ ಗೆ ಮುಂದೆ ಆದದ್ದು
Thursday, January 28, 2021
ಮಂಗಳೂರು; ಫೇಸ್‌ಬುಕ್ ಮೂಲಕ ಹಣದ ಆಮೀಷವೊಡ್ಡಿ ವಂಚನೆ ಮಾಡುವ ಪ್ರಕರಣಗಳು ನಡೆಯುತ್ತಲೆ ಇರುತ್ತದೆ. ಇದೇ ರೀತಿ ಮಂಗಳೂರಿನ ವ್ಯಕ್ತಿಯೊಬ್ಬರು ಫೇಸ್‌ಬುಕ್ ಪ್ರೆಂಡ್ 35 ಲಕ್ಷದ ಚಿನ್ನ, ವಜ್ರದ ಉಡುಗೊರೆ ಕಳುಹಿಸುತ್ತಾರೆ ಎಂಬುದನ್ನು ನಂಬಿ 1,35,000 ರೂ ಕಳೆದುಕೊಂಡಿದ್ದಾರೆ.
ಮಂಗಳೂರಿನ ವ್ಯಕ್ತಿಗೆ 2021 ಜನವರಿ 3 ರಂದು FACEBOOK ಖಾತೆಯ ಮುಖೇನ ವಿದೇಶದ ರೇನಾಲ್ಟ್ ಫ್ರೀನ್ಸ್ ಕ್ರಿಸ್ಪಫರ್ ಎಂಬ ವ್ಯಕ್ತಿಯ ಪರಿಚಯವಾಗಿದ್ದು ನಂತರ FACEBOOK ನಲ್ಲಿ ಚ್ಯಾಟಿಂಗ್ ಮಾಡುತ್ತಿದ್ದರು. ಚಾಟಿಂಗ್ ವೇಳೆ ವಿದೇಶದ ಪ್ರೆಂಡ್ ಸುಮಾರು 35 ಲಕ್ಷದ ಚಿನ್ನ ಹಾಗೂ ಡೈಮಂಡ್ ಉಡುಗೊರೆಯನ್ನು ಕಳುಹಿಸಿ ಕೊಡುವುದಾಗಿ ಹೇಳಿದ್ದಾರೆ. ಅದನ್ನು ಮಂಗಳೂರಿನ ವ್ಯಕ್ತಿ ನಂಬಿದ್ದಾರೆ.
ಜನವರಿ 18ರಂದು 8754231656 ನೇ ನಂಬ್ರದಿಂದ ಓರ್ವ ಮಹಿಳೆಯು ಕರೆ ಮಾಡಿ ದಿಲ್ಲಿ ಕಸ್ಟಮ್ ಆಫೀಸರ್ ಎಂದು ಹೇಳಿ ಪರಿಚಯಿಸಿ ದಿಲ್ಲಿ AIRPORT ಗೆ ಒಂದು ಪಾರ್ಸೆಲ್ ಬಂದಿದ್ದು ಅದಕ್ಕೆ ಡೆಲಿವರಿ ಚಾರ್ಚ್ ಎಂದು ಹೇಳಿ ಅವರು ಕಳುಹಿಸಿದ ಖಾತೆ ನಂಬರ್ ಗೆ ರೂ,30,000/- ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸುತ್ತಾರೆ ಮತ್ತೆ ಜ.20 ರಂದು AIRPORT ನಿಂದ ಕರೆ ಬಂದಿದ್ದು ಸದ್ರಿ ಮಹಿಳೆಯು ವಿವಿಧ ಕಾರಣಗಳನ್ನು ತಿಳಿಸಿ ಸುಮಾರು 1,05,000/- ಹಣವನ್ನು ವಿವಿಧ ಹಂತಗಳಲ್ಲಿ ವಿವಿಧ ಬ್ಯಾಂಕ್ ಗಳಿಗೆ ಹಣ ವರ್ಗಾವಣೆ ಮಾಡಿಸಿದ್ದಾರೆ.
ಮಂಗಳೂರಿನ ವ್ಯಕ್ತಿ ಹೀಗೆ ಹಂತ ಹಂತವಾಗಿ ಒಟ್ಟು ರೂ. 1,35,000/- ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸಮಾಡಿದ್ದು ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ