-->

  ಉಜಿರೆಯಲ್ಲಿ SDPI ಕಾರ್ಯಕರ್ತರ ಪಾಕಿಸ್ತಾನ ಜಿಂದಾಬಾದ್ ಘೋಷಣೆ: ಮೂವರು ಕಾರ್ಯಕರ್ತರ ಬಂಧನ, ಇನ್ನೂ ಮುಂದುವರಿದಿದೆ ಶೋಧ!

ಉಜಿರೆಯಲ್ಲಿ SDPI ಕಾರ್ಯಕರ್ತರ ಪಾಕಿಸ್ತಾನ ಜಿಂದಾಬಾದ್ ಘೋಷಣೆ: ಮೂವರು ಕಾರ್ಯಕರ್ತರ ಬಂಧನ, ಇನ್ನೂ ಮುಂದುವರಿದಿದೆ ಶೋಧ!




ಮಂಗಳೂರು: ಚುನಾವಣೆಯ ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.


ಉಜಿರೆಯಲ್ಲಿ ಎಸ್ ಡಿ ಪಿ ಐ ಪಕ್ಷದ ಕಾರ್ಯಕರ್ತರು ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದರು ಎಂಬ ಆರೋಪದ ವಿಡಿಯೋ ವೈರಲ್ ಆಗಿತ್ತು. ಈ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು.


ಪಿಲಿಚಂಡಿ ಕಲ್ಲು ಕುವೆಟ್ಟು ನಿವಾಸಿಗಳಾದ ಮೊಹಮ್ಮದ್ ಹರ್ಷದ್( 22 ), ದಾವೂದ್ ( 36) ಹಾಗೂ ಇಸಾಕ್ (28) ಎಂಬವರುಗಳನ್ನು ಬಂಧಿಸಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ಇನ್ನೂ ಹಲವರ ಶೋಧ ಕಾರ್ಯಾಚರಣೆಯನ್ನುಯ ಪೊಲೀಸರು ಮಾಡುತ್ತಿದ್ದಾರೆ


ವೈರಲ್ ವಿಡಿಯೋ ಪರಿಶೀಲಿಸಿದ ಪೊಲೀಸರು ಇಂದು ಬೆಳಿಗ್ಗೆ ಮೂವರನ್ನು ಬಂಧಿಸಿದ್ದಾರೆ. ವೈರಲ್ ಆದ ವೀಡಿಯೋವನ್ನು ಹೊರತುಪಡಿಸಿ ಈ ಘಟನೆಗೆ ಸಂಬಂಧಿಸಿದ ಮೊಬೈಲ್ ಮೂಲಕ ಚಿತ್ರೀಕರಿಸಲಾದ ಇತರ ಎರಡು ವೀಡಿಯೊಗಳು ಲಭ್ಯವಾಗಿದ್ದು ಅವುಗಳನ್ನೂ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99