-->

 ಕೊರೊನಾ ಸಂತ್ರಸ್ತ ಅಲ್ಪಸಂಖ್ಯಾತ ಮಹಿಳೆಯರಿಗೆ ಸಾಲ ಯೋಜನೆ

ಕೊರೊನಾ ಸಂತ್ರಸ್ತ ಅಲ್ಪಸಂಖ್ಯಾತ ಮಹಿಳೆಯರಿಗೆ ಸಾಲ ಯೋಜನೆ
ಮಂಗಳೂರು : ಕೊರೊನಾದಿಂದ ಆರ್ಥಿಕ ತೊಂದರೆ ಅನುಭವಿಸುತ್ತಿರುವ ಅಲ್ಪಸಂಖ್ಯಾತ ಮಹಿಳೆಯರಿಗೆ ಅಲ್ಪಸಂಖ್ಯಾತ ಸಮುದಾಯ ನಿಗಮದಿಂದದಿಂದ ಸಾಲಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಯಾವುದೇ ಯೋಜನೆಯಲ್ಲೂ ಇದುವರೆಗೆ  ಸಾಲ, ಸಹಾಯಧನ ಪಡೆಯದ ಕೊರೊನಾ ಪಿಡುಗಿನಿಂದಾಗಿ ತೊಂದರೆಗೊಳಗಾದ ಅಂತ್ಯೋದಯ/ ಬಿಪಿಎಲ್ ಕಾರ್ಡ್ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. 25 ರಿಂದ 50 ವಯೋಮಾನದೊಳಗಿನ ಮಹಿಳೆಯರು, ತಳ್ಳುವ ಗಾಡಿಯಲ್ಲಿ ವ್ಯಾಪಾರ, ಬೀದಿ ವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ, ಕಿರಾಣಿ ಅಂಗಡಿ, ಅರಿಷಿನ/ ಕುಂಕುಮ/ ಅಗರಬತ್ತಿ/ ಕರ್ಪೂರ, ಪಾದಚಾರಿ ಮಾರ್ಗದಲ್ಲಿ ಟೀ/ಕಾಫಿ ಮಾರಾಟ, ಎಳನೀರು ವ್ಯಾಪಾರ, ಹೂವಿನ ವ್ಯಾಪಾರ, ತರಕಾರಿ ವ್ಯಾಪಾರ, ಹಣ್ಣಿನ ವ್ಯಾಪಾರ, ಇನ್ನಿತರ ಸಣ್ಣ ವ್ಯಾಪಾರ ನಡೆಸಲು ಆರಂಭಿಕ ಬಂಡವಾಳಕ್ಕಾಗಿ ರೂ.10,000/- ಮೊತ್ತದ ಅಲ್ಪಾವಧಿ ಸಾಲ ನೀಡಲಾಗುತ್ತದೆ ಎಂದು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99