
ದಕ್ಷಿಣ ಕನ್ನಡದಲ್ಲಿ ಮದರಸ ನೋಂದಣಿಗೆ ಸೂಚನೆ
(ಗಲ್ಪ್ ಕನ್ನಡಿಗ)ಮಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೊಂದಾವಣೆಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮದರಸಗಳಲ್ಲಿ 100 ಕ್ಕಿಂತ ಅಧಿಕ ಮಕ್ಕಳು ಮದರಸ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ ಅಂತಹ ಮದರಸದ ಹೆಸರು ಮತ್ತು ವಿಳಾಸವನ್ನು ಕೂಡಲೇ ಜಿಲ್ಲಾ ವಕ್ಫ್ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಭವನದ 2ನೇ ಮಹಡಿ, ಓಲ್ಡ್‍ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿಗೆ ಸಲ್ಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಕ್ಫ್ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಭವನದ 2ನೇ ಮಹಡಿ, ಓಲ್ಡ್‍ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು, ದೂರವಾಣಿ ಸಂಖ್ಯೆ 0824-2420078 ಸಂಪರ್ಕಿಸಲು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆ ತಿಳಿಸಿದೆ.